Kannada NewsKarnataka NewsLatest

89 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರ ಚಾಲನೆ ನೀಡುತ್ತಿರುವ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಗುರುವಾರ 89 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.​
ಬೆನಕನಹಳ್ಳಿ ಗ್ರಾಮದಲ್ಲಿ 68 ಲಕ್ಷ ರೂ, ಹಾಗೂ ಸೋನೋಲಿ ಗ್ರಾಮದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ನಿಗಮಗಳ ವತಿಯಿಂದ ಈ ಕಾಮಗಾರಿಗಳು ನಡೆಯಲಿವೆ.
 
68 ಲಕ್ಷ ರೂ. ವೆಚ್ಚ
​  ಬೆನಕನಹಳ್ಳಿ ಗ್ರಾಮ​ಕ್ಕೆ​  ಲೋಕೋಪಯೋಗಿ ಇಲಾಖೆಯ ವತಿಯಿಂದ 22 ಲಕ್ಷ ರೂ,​ ಹಾಗೂ ಕರ್ನಾಟಕ ನೀರಾವರಿ ನಿಗಮದ ವತಿಯಿಂದ 46 ಲಕ್ಷ ರೂ,​ ಬಿಡುಗಡೆಯಾಗಿದೆ. ಒಟ್ಟೂ 68 ಲಕ್ಷ ರೂ. ವೆಚ್ಚದ ಈ ಕಾಮಗಾರಿಗೆ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿ ಚಾಲನೆ ನೀಡಿದರು. 
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮಲ್ಲೇಶ ಚೌಗುಲೆ, ಸಿದ್ದಪ್ಪ ಕಾಂಬಳೆ, ಮಹೇಶ ಕೋಲಕಾರ, ಬಾಳು ದೇಸೂರಕರ್, ಕಲ್ಲಪ್ಪ ದೇಸೂರಕರ್, ಜ್ಯೋತಿಬಾ ಬಿಸಲೆ, ಮೋಹನ ಸಾಂಬ್ರೆಕರ್, ಆನಂದ ಕೋಲಕಾರ, ಮೀನಾಕ್ಷಿ ಪಾಟೀಲ, ಪದ್ಮರಾಜ ಪಾಟೀಲ, ಪ್ರಭಾಕರ್ ದೇಸೂರಕರ್, ಭೀಮಪ್ಪ ಕೇದರ್ಜಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.​
2​1​ ಲಕ್ಷ ರೂ. ಬಿಡುಗಡೆ
​ ಸೋನೋಲಿ ಗ್ರಾಮದಲ್ಲಿ​ ಕಾಂಕ್ರೀಟ್ ರಸ್ತೆಯ ನಿರ್ಮಾಣ​ಕ್ಕಾಗಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ  21 ಲಕ್ಷ ರೂ, ​ಮಂಜೂರಾಗಿದೆ. ಈ ಕಾಮಗಾರಿಗೆ ಸಹ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೂಜೆ ನೆರವೇರಿಸಿದರು. 
ಈ ಸಮಯದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಗುರುನಾಥ ಪಾಟೀಲ, ಪ್ರಕಾಶ ಪಾಟೀಲ, ಮನು ಬೆಳಗಾಂವ್ಕರ್, ಯಲ್ಲಪ್ಪ ಡೇಕೋಳ್ಕರ್, ಮನೋಹರ ಜಾಂಗ್ರುಚೆ, ಬಾಲಕೃಷ್ಣ ಲೋಹಾರ, ದೇವಪ್ಪ ಕಡೋಲ್ಕರ್, ರಾವಳು ಪಾಟೀಲ, ಗ್ರಾಮ ಸುಧಾರಣೆಯ ಕಮೀಟಿಯ ಪದಾಧಿಕಾರಿಗಳು, ಮಹಿಳಾ ಕಮೀಟಿಯ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
​  –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button