Belagavi NewsBelgaum NewsKannada NewsKarnataka News

*ವೀರರಾಣಿ ಬೆಳವಡಿ ಮಲ್ಲಮ್ಮ ಜ್ಯೋತಿಗೆ ಸ್ವಾಗತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮ ವೀರಜ್ಯೋತಿಗೆ ನಗರದ ಚನ್ನಮ್ಮ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. 

ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಮಂಗೇಶ ಪವಾರ ಅವರು ಮಲ್ಲಮ್ಮನ ತವರೂರಾದ ಶಿರಸಿಯ ಸೋಂದಾದಿಂದ ಹೊರಟ ವೀರಜ್ಯೋತಿಯನ್ನು ಗುರುವಾರ (ಫೆ.27) ವೀರರಾಣಿ ಬೆಳವಡಿ ಮಲ್ಲಮ್ಮ ಜ್ಯೋತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿ ಸ್ವಾಗತಿಸಿದರು.

Home add -Advt

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗಣ್ಯರು, ಮುಖಂಡರುಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಫೆ.28 ಹಾಗೂ ಮಾ.1 ರಂದು ಬೆಳವಡಿ ಮಲ್ಲಮ್ಮ ಉತ್ಸವ ಜರುಗಲಿದೆ. ಈ ಹಿನ್ನಲೆಯಲ್ಲಿ ಬೆಳವಡಿ ಮಲ್ಲಮ್ಮ ವೀರಜ್ಯೋತಿಯು ಮಲ್ಲಮ್ಮಳ ತವರೂರಾದ ಶಿರಸಿಯ ಸೋಂದಾದಿಂದ ಹೊರಟು ಯಲ್ಲಾಪೂರ-ಹಳಿಯಾಳ-ಅಳ್ಳಾವರ-ಖಾನಾಪುರ-ಬೆಳಗಾವಿ-ಬೈಲಹೊಂಗಲ ಮಾರ್ಗವಾಗಿ ಅನಗೋಳ, ನಯಾನಗರ, ಸಂಗೋಳ್ಳಿ, ಪಟ್ಟಿಹಾಳ ಕೆ. ಬಿ, ಸಿದ್ಧಸಮುದ್ರ ಮಠಕ್ಕೆ ಆಗಮಿಸಿ. ಫೆ.28 ರಂದು ಮುಂಜಾನೆ 10 ಗಂಟೆಗೆ ಬೆಳವಡಿಯಲ್ಲಿ ವೀರಜ್ಯೋತಿಯನ್ನು ಬರಮಾಡಿಕೊಳ್ಳಲಾಗುವುದು.

Related Articles

Back to top button