Latest

ಕೆಜಿಎಫ್ ದಾಖಲೆ ಮುರಿದ ಜೇಮ್ಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 4000 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ.

ಮೊದಲ ದಿನವೇ ಕೆಜಿಎಫ್ ದಾಖಲೆಯನ್ನು ಕೂಡ ಜೇಮ್ಸ್ ಮುರಿದಿದೆ. ಮೊದಲ ದಿನ 30 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಗಾಂಧಿನಗರ ಮೂಲಗಳು ತಿಳಿಸಿವೆ. ಕೆಜಿಎಫ್ ಚಿತ್ರ ಮೊದಲ ದಿನ 25 ಕೋಟಿ ರೂಪಾಯಿ ಗಳಿಸಿತ್ತು.

Home add -Advt

ಕೋವಿಡ್ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದ ಥಿಯೇಟರ್ ಗಳಲ್ಲಿ ಶೇ.100ರಷ್ಟು ಪ್ರೇಕ್ಷಾರಿಗೆ ಅವಕಾಶ ನೀಡಲಾಗಿದ್ದು, ಪುನೀತ್ ಕೊನೆ ಚಿತ್ರವನ್ನು ನೋಡಲೇಬೇಕು ಎಂಬ ಕಾರಣಕ್ಕೆ ಜನರು ಚಿತ್ರಮಂದಿರಗಳಿಗೆ ಧಾವಿಸುತ್ತಿದ್ದಾರೆ.
ಬೆಳಗಾವಿ: ಕಾರಾಗೃಹದಿಂದ ಪರಾರಿಯಾದ ವಿಚಾರಣಾಧೀನ ಕೈದಿ

Related Articles

Back to top button