Latest

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: 103 ವರ್ಷದ ವೃದ್ಧ ಜೈಲುಪಾಲು

ಪ್ರಗತಿ ವಾಹಿನಿ ಸುದ್ದಿ ಚೆನ್ನೈ –

ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಇತ್ತೀಚೆಗೆ ಹೆಚ್ಚುತ್ತಿದೆಯೋ ಅಥವಾ ಮಾಧ್ಯಮಗಳ ಮೂಲಕ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆಯೋ ಗೊತ್ತಿಲ್ಲ, ಆದರೆ ತಮೀಳುನಾಡಿನಲ್ಲಿ ನಡೆದ ಒಂದು ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಬರೋಬ್ಬರಿ ೧೦೩ ವರ್ಷದ ವೃದ್ಧನೊಬ್ಬ ೧೦ ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 10 ಶಿಕ್ಷೆಗೊಳಗಾಗಿ ಜೈಲುಪಾಲಾಗಿದ್ದಾನೆ.

ಕೆ. ಪರಶುರಾಮನ್ ಎಂಬ ೧೦೩ ವರ್ಷದ ವೃದ್ಧ ಶಿಕ್ಷೆಗೊಳಗಾದ ಆರೋಪಿ. ಚೆನ್ನೈ ನಗರದ ಹೊರವಲಯದ ಸೆನ್ನೀರ್‌ಕುಪ್ಪಮ್ ಗ್ರಾಮದ ವ್ಯಕ್ತಿಯಾದ ಈತ ಈತ ೧೦ ವರ್ಷದ ಬಾಲಕಿಗೆ ೨೦೧೮ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಆಗ ಆತನ ವಯಸ್ಸು ೯೯.

Home add -Advt

ನಿವೃತ್ತ ಶಾಲಾ ಶಿಕ್ಷಕನೂ ಆಗಿರುವ ಪರಶುರಾಮನ್ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಾಲಕಿ ತನ್ನ ಕುಟಂಬದವರಿಗೆ ತಿಳಿಸಿದ್ದು ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚನ್ನೈ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಮಾ. ೧೬ರಂದು ತೀರ್ಪು ಪ್ರಕಟವಾಗಿದ್ದು ಆರೋಪಿ ವೃದ್ಧ ಪರಶುರಾಮನಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

 

ಪ್ರೀತಿಯ ಹೆಸರಲ್ಲಿ ಯುವತಿಗೆ ಮೋಸ; ಮದುವೆಗೆ ಒತ್ತಾಯಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಯುವಕ

https://pragati.taskdun.com/latest/asiarrestsexual-assult/

Related Articles

Back to top button