ಪ್ರಗತಿ ವಾಹಿನಿ ಸುದ್ದಿ ನವದೆಹಲಿ –
ಡೀಸೆಲ್ ದರ ಏರಿಕೆಯಾಗುವ ಸುದ್ದಿ ಈಗ ನಿಜವಾಗಿದೆ. ಆದರೆ ಸಧ್ಯ ಜನಸಾಮಾನ್ಯರಿಗೆ ಇದರ ಹೊರೆ ಬಿದ್ದಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಶೇ. ೪೦ರಷ್ಟು ಏರಿಕೆಯಾಗಿದೆ. ಏಕಾಏಕಿ ದರ ಏರಿಕೆಯಿಂದಾಗಿ ಭಾರತದಲ್ಲೂ ಡೀಸೆಲ್ ಪೆಟ್ರೋಲ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ.
ಅದರಂತೆ ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ೨೫ ರೂ. ಏರಿಕೆ ಮಾಡಲಾಗಿದೆ. ಆದರೆ ಇದು ಸಧ್ಯ ಸಗಟು ಮಾರಾಟಗಾರರಿಗೆ ಮಾತ್ರ ಅನ್ವಯವಾಗತ್ತಿದೆ. ಚಿಲ್ಲರೆ ಮಾರಾಟಕ್ಕೆ ಏರಿಕೆಯಾದ ದರ ಅನ್ವಯಿಸುವುದಿಲ್ಲ. ಬಂಕ್‌ಗಳಲ್ಲಿ ಮಾರಾಟುವಾಗುವ ಡೀಸೆಲ್ ಮೇಲೆ ಇದರ ಪರಿಣಾಮ ಬೀರುವುದಿಲ್ಲ ಎಂದು ವರದಿಯಾಗಿದೆ.
ಆದಾಗ್ಯೂ ಯಾವುದೇ ಕ್ಷಣದಲ್ಲಿ ಗ್ರಾಹಕರಿಗೆ ಶಾಕ್ ತಟ್ಟಿದರೆ ಆಶ್ಚರ್ಯವಿಲ್ಲ.
ಒಂದೇ ಬಾರಿ ಪೆಟ್ರೋಲ್, ಡಿಸೆಲ್ ಬೆಲೆ ಐತಿಹಾಸಿಕ ದಾಖಲೆ ಏರಿಕೆ ಸಾಧ್ಯತೆ: 2 -3 ದಿನದಲ್ಲೇ ಬಿಗ್ ಶಾಕ್ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ