ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ಒಂದು ಕಾಲದಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ನಿರ್ವಹಿಸಿದ್ದ ಮಾಜಿ ಮಂತ್ರಿ ಇದೀಗ ಜೀವನೋಪಾಯಕ್ಕಾಗಿ ಕ್ಯಾಬ್ ಚಾಲಕಾರಿಗಿರುವುದು ಎಲ್ಲರ ನಿಬ್ಬೆರಗಾಗುವಂತೆ ಮಾಡಿದೆ.
ಅಪಘಾನಿಸ್ತಾನದಲ್ಲಿ ಹಣಕಾಸು ಇಲಾಖೆ ಸಚಿವರಾಗಿದ್ದ ಖಲೀದ್ ಪಾಯೆಂಡಾ ಈಗ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವರಾಗಿದ್ದವರು ಕ್ಯಾಬ್ ಚಾಲಕರಾಗಬೇಕಾದ ದುಸ್ಥಿತಿಗೆ ಕಾರಣವಾದರು ಏನು? ಇಲ್ಲಿದೆ ಸ್ಟೋರಿ.
ಕಳೆದ ವರ್ಷ ಅಪ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾದ ಸುದ್ದಿ ಎಲ್ಲರಿಗೂ ಗೊತ್ತೆ ಇದೆ. ತಾಲಿಬಾನ್ ಆಕ್ರಮಣದ ಬೆನ್ನಲ್ಲೇ ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಅಪ್ಘಾನ್ ನ ನಾಗರಿಕರು, ನೌಕರರು, ಸರ್ಕಾರಿ ಹುದ್ದೆಯಲ್ಲಿದ್ದವರು, ಕೇಂದ್ರ ಸಚಿವರು ಕೂಡ ದೇಶ ಬಿಟ್ಟು ಬೇರೆ ಬೇರೆ ದೇಶಗಳಿಗೆ ತೆರಳಿ ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಅಂತೆಯೆ ಅಶ್ರಫ್ ಘನಿ ಸರ್ಕಾರದಲ್ಲಿ ಅಂದು ಅಪ್ಘಾನ್ ಹಣಕಾಸು ಸಚಿವರಾಗಿದ್ದ ಖಲೀದ್ ಪಾಯೆಂಡಾ ತಮ್ಮ ಕುಟುಂಬದೊಂದಿಗೆ ಆಪ್ಘಾನ್ ಬಿಟ್ಟು ವಾಷಿಂಗ್ಟನ್ ಗೆ ತೆರಳಿದ್ದು, ಅಲ್ಲಿ ಉಬರ್ ಚಾಲಕರಾಗಿದ್ದಾರೆ. ಅಲ್ಲದೇ ಜಾರ್ಜ್ ಟೌನ್ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಡಿಗೆಗೆ ಇದ್ದ ಶಿಕ್ಷಕಿಯನ್ನೆ ಪ್ರೀತಿಸಿ ಮದುವೆಯಾದ ಓನರ್; ಕೈ ಕೊಟ್ಟು 2ನೇ ವಿವಾಹವಾಗಿ ಎಸ್ಕೇಪ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ