Latest

ಟಿಕ್ ಟಾಕ್ ಪ್ರಿಯರಿಗೆ ಸಿಹಿಸುದ್ದಿ

ಪ್ರಗತಿವಾಹಿನಿ ಸುದ್ದಿ, ಮಧುರೈ:

ಚೀನಾ ಮೂಲದ ಟಿಕ್ ಟಾಕ್ ಮೊಬೈಲ್ ಆ್ಯಪ್ ಮೇಲಿನ ಮಧ್ಯಂತರ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಾಪಸ್ ಪಡೆದಿದ್ದು, ಟಿಕ್ ಟಾಕ್ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ.
ಕೋರ್ಟ್ ಆದೇಶದಂತೆ ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್‌ನಿಂದ ಟಿಕ್ ಟಾಕ್ ಅಪ್ಲಿಕೇಷನ್ ತೆಗೆದು ಹಾಕಲಾಗಿತ್ತು. ನಿಷೇಧ ತೆರವು ಬಳಿಕ ಶೀಘ್ರವೇ ಟಿಕ್ ಟಾಕ್ ಅಪ್ ಗ್ರಾಹಕರಿಗೆ ಲಭ್ಯವಾಗಲಿದೆ.
ಟಿಕ್‌ ಟಾಕ್‌ ವಿಷಯಗಳನ್ನು ನಿಯಂತ್ರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅದು ಯಾವುದೇ ವಿಷಯವನ್ನು ಅಪ್ಲೋಡ್ ಮಾಡಲು ಸಾಧ್ಯವಾಗದ ಮಧ್ಯವರ್ತಿ ವೇದಿಕೆಯಾಗಿದೆ ಎಂದು ಚೀನಾ ಕಂಪನಿಯು ಸಲ್ಲಿಸಿರುವ ದಾಖಲೆಗಳ ಅನುಸಾರ ಇನ್ಮುಂದೆ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯ, ಕಂಪನಿಯು ಹೇಳಿಕೆ ನೀಡಿರುವಂತೆ ನಿಯಂತ್ರಕ ಕಾರ್ಯವಿಧಾನಗಳು ಪರಿಣಾಮಕಾರಿ ಎಂದು ಕಂಡುಬರದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದೆ.
ಏ. 3ರಂದು ನ್ಯಾಯಾಲಯವು ಟಿಕ್‌ಟಾಕ್ ಆ್ಯಪ್‌ ಡೌನ್‌ಲೋಡ್‌ನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಆದೇಶ ಹೊರಡಿಸಿತ್ತು. ಟಿಕ್ ಟಾಕ್ ವಿಡಿಯೋದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಅಸಭ್ಯ ವಿಡಿಯೋಗಳು ಹೆಚ್ಚಾಗಿವೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಷೇಧ ಹೇರುವಂತೆ ಕೋರಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button