
ಪ್ರಗತಿವಾಹಿನಿ ಸುದ್ದಿ; ಕಾರವಾರ: ಕಾರವಾರ-ಹುಬ್ಬಳ್ಳಿ ಮೂಲದ ಶ್ರೀಕೃಷ್ಣ ಗ್ರೂಪ್ ಗೆ ಸೇರಿದ ಶ್ರೀಕೃಷ್ಣ ಮಿಲ್ಕ್ಸ್ ಪ್ರೈವೆಟ್ ಲಿಮಿಟೆಡ್ ಅನ್ನು 50 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಹೈದರಾಬಾದ್ ನಲ್ಲಿರುವ ದೊಡ್ಲ ಡೈರಿ ಲಿಮಿಟೆಡ್ ಘೋಷಿಸಿದೆ.
ಹಾಲು ಸಂಗ್ರಹಣೆಯಲ್ಲಿ ದೊಡ್ಲ ಡೈರಿ ಖಾಸಗಿ ವಲಯದಲ್ಲಿ ಮೂರನೇ ಅತಿದೊಡ್ಡ ಡೈರಿ ಕಂಪನಿಯಾಗಿದೆ. ಇನ್ನು ಶ್ರೀಕೃಷ್ಣ ಮಿಲ್ಕ್ ಕರ್ನಾಟಕದ ಮೊದಲ ಖಾಸಗಿ ಡೈರಿಯಾಗಿದೆ. ಇದೀಗ ಈ ಎರಡೂ ದಕ್ಷಿಣ ಭಾರತ ಕಂಪನಿಗಳು ಒಟ್ಟಾಗಿ ಸಾಗಲು ನಿರ್ಧರಿಸಿವೆ.
ಶ್ರೀಕೃಷ್ಣ ಮಿಲ್ಕ್ ನ ವ್ಯವಹಾರವನ್ನು ಖರೀದಿ ಆಧಾರದ ಮೇಲೆ ಸ್ವಾಧೀನ ಪಡಿಸಿಕೊಳ್ಳಲು ವ್ಯಾಪಾರ ವರ್ಗಾವಣೆ ಒಪ್ಪಂದ ಮಾಡಿಕೊಂಡಿರುವುದಾಗಿ ಹಾಗೂ ಎರಡು ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಗಿಯಲಿದೆ ಎಂದು ದೊಡ್ಲ ಡೈರಿ ಷೇರುಪೇಟೆಗೆ ತಿಳಿಸಿದ ಮಾಹಿತಿಯಲ್ಲಿ ವಿವರಿಸಿದೆ.
ಹಾಲು ಖರೀದಿ ಮತ್ತು ಮಾರಾಟದಲ್ಲಿ ಜನಪ್ರಿಯ ಕಂಪನಿಯಾಗಿರುವ ದೊಡ್ಲ ಡೈರಿ, ಹಾಲು, ಮೊಸರು, ತುಪ್ಪ, ಪನೀರ್ ಮಾತ್ರವಲ್ಲದೇ, ಬೆಣ್ಣೆ, ಸುವಾಸನೆಯುಕ್ತ ಹಾಲು, ದೂಧ್ ಪೇಡಾ, ಐಸ್ ಕ್ರೀಮ್ ಮತ್ತು ಹಾಲಿನಿಂದ ತಯಾರಿಸಿದ ಸಿಹಿತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಇನ್ನು ಶ್ರೀಕೃಷ್ಣ ಕಂಪನಿ ಹಾಲು, ಲಸ್ಸಿ, ಮಜ್ಜಿಗೆ, ಸುವಾಸಿತ ಹಾಲು, ಮೊಸರು, ಪನ್ನೀರ್, ಖೋವಾ, ಬೆಣ್ಣೆ, ತುಪ್ಪದ ಜತೆಗೆ ಪೇಢಾ, ಮೈಸೂರ್‌ಪಾಕ್, ಬೇಸನ್ ಲಾಡು, ಸೋನ್‌ಪಪ್ಡಿ, ಕೇಸರ್ ಪೇಡ, ಕರದಂಟು, ಮಲಾಯಿ ಚಿಕ್ಕಿ, ಡ್ರೈಫ್ರುಟ್ಸ್ ಬೈಟ್ಸ್, ರಸಗುಲ್ಲ, ಗುಲಾಬ್ ಜಾಮೂನ್ ಮೊದಲಾದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಈ ಖರೀದಿಯಿಂದ ರಾಜ್ಯದಲ್ಲಿ ದೊಡ್ಲದ ಮಾರುಕಟ್ಟೆ ಮತ್ತಷ್ಟು ವಿಸ್ತರಣೆಯಾಗಲಿದೆ.
ಅಭಿನಯ ಭಾರತಿ ರಂಗ ಪ್ರಶಸ್ತಿ ಶ್ರೀಪಾದ ಭಟ್ಟರಿಗೆ