ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಫಿಡೇ ಮಾಸ್ಟರ್ ನಿರಂಜನ ನವಲಗುಂದ ಇತ್ತೀಚೆಗೆ (ದಿ:17/4/2019 ರಿಂದ 21/04/2019ರ ವರೆಗೆ) ಬೆಂಗಳೂರಿನ ಸಿಲಿಕಾನ್ ಸಿಟಿ ಶಾಲೆಯಲ್ಲಿ ನಡೆದ 3ನೇ ಬೆಂಗಳೂರು ಮುಕ್ತ ಅಂತರರಾಷ್ಟ್ರೀಯ ಶ್ರೇಯಾಂಕಿತ ಚದುರಂಗ ಸ್ಪರ್ಧೆಯಲ್ಲಿ ರಾಜ್ಯದ ಪರವಾಗಿ ಭಾಗವಹಿಸಿ 10 ಸುತ್ತಿನ ಸ್ಪರ್ಧೆಯಲ್ಲಿ 8.5 ಅಂಕಗಳೊಂದಿಗೆ ಉತ್ತಮ ಆಟವನ್ನು ಪ್ರದರ್ಶಿಸಿ, ಅಂಕಗಳ ಆಧಾರದ ಮೇಲೆ 2ನೇ ಸ್ಥಾನದ ಸ್ಪರ್ಧಾಳುವಿನೊಂದಿಗೆ ಸಮ ಅಂಕಗಳನ್ನು ಪಡೆದಾಗ್ಯೂ ಟೈ ಬ್ರೇಕ್ ನಿಯಮದನ್ವಯ 3ನೇ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಗಿರೀಶ ಕೌಶಿಕ , ಕರ್ನಾಟಕದ ಇಂಟರನ್ಯಾಶನಲ್ ಮಾಸ್ಟರ್, ಸ್ಪರ್ಧೆಯಲ್ಲಿ 9.5 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದರೆ, ಇಂಟರನ್ಯಾಶನಲ್ ಮಾಸ್ಟರ್ ಚಕ್ರವರ್ತಿ ರೆಡ್ಡಿ, 8.5 ಅಂಕಗಳನ್ನು ಗಳಿಸಿ 2ನೇ ಸ್ಥಾನವನ್ನು ಪಡೆದರು.
ವಿವಿಧ ರಾಜ್ಯಗಳ ಒಟ್ಟು 390 ಚದುರಂಗ ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು . ಬೆಂಗಳೂರಿನಲ್ಲಿ ಚದುರಂಗ ಆಟಗಾರರ ಪಾಲಕರು ಹಾಗೂ ಆಸಕ್ತರು ಸೇರಿ ಈ ಬೃಹತ್ ಚದುರಂಗ ಸ್ಪರ್ಧೆಯನ್ನು ಆಯೋಜಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ