Latest

ಪ್ರಶಸ್ತಿಗಳಿಗೆ ಅರ್ಜಿನೂ ಬೇಡ… ಯಾರ ಮರ್ಜಿನೂ ಬೇಡ.. ಸಾಧನೆಯೊಂದೆ ಸಾಕು.. ನಾಡೋಜ ಡಾ. ಮಹೇಶ ಜೋಶಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಶಸ್ತಿಗೆ ಅರ್ಜಿಯೂ ಬೇಡ ಜೊತೆಗೆ ಯಾವುದೇ ಮರ್ಜಿಯೂ ಬೇಡ. ಪರಿಷತ್ತು ಸಾದಕರಿಗೆ ಹುಡುಕಿಕೊಂಡು ಹೋಗಿ ಪ್ರಶಸ್ತಿ ನೀಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಇಂದು ಕನ್ನಡ ಸಾಹಿತ್ಯ ಪರಿಷತ್ತನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ ಶ್ರೀಮತಿ ಲಿಂಗಮ್ಮ ಮತ್ತು ಡಾ. ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ನಾಡು ಋಷಿ ಸಂಸ್ಕೃತಿಯನ್ನು ಹೊಂದಿದೆ. ಈ ಸಂಸ್ಕೃತಿ ನಿಂತಿದ್ದೇ ಕೃಷಿ ಸಂಸ್ಕೃತಿಯ ಆಧಾರದ ಮೇಲೆ ಆದ್ದರಿಂದ ರೈತರು ದೇವರಿಗೆ ಸಮ. ಈ ಮಾತನ್ನು ರಾಮಕೃಷ್ಣ ಪರಮಹಂಸರು, ಕುವೆಂಪು, ಗುರು ಗೋವಿಂದಭಟ್ಟರು, ಶಿಶುನಾಳ ಶರಿಫರು ಸೇರಿದಂತೆ ಬಹುತೇಕರು ಒಪ್ಪಿಕೊಂಡಿದ್ದಾರೆ ಎಂದರು.

ಕೃಷಿ ಕೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡ ಮಾಡುವ ಈ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ಕರೋನಾ ಹಿನ್ನೆಲೆಯಲ್ಲಿ ಪ್ರಧಾನ ಮಾಡಿರಲಿಲ್ಲ. ಆದ್ದರಿಂದ ಇಂದು 2020 ನೇ ಸಾಲಿನ ಪ್ರಶಸ್ತಿಯನ್ನು ಎಸ್. ಕೃಷ್ಣೇಗೌಡ ಇವರಿಗೆ ಹಾಗೂ 2021ರ ಪ್ರಶಸ್ತಿಯನ್ನು ಜಿ. ಎನ್. ನಾರಾಯಣಸ್ವಾಮಿ ಅವರಿಗೆ ಪ್ರಧಾನ ಮಾಡಲಾಯಿತು. ಪ್ರಶಸ್ತಿ ತಲಾ 10,000 ರೂ ಹಾಗೂ ಪ್ರಶಸ್ತಿ ಫಲಕದ ಜೊತೆ ಫಲ ತಾಂಬೂಲದೊಂದಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರಧಾನ ಮಾಡಿದ ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಆರ್. ಆರ್. ಹಂಚಿನಾಳ ಮಾತನಾಡಿ ನಮ್ಮಲ್ಲಿ ನೀರನ್ನು ಸರಿಯಾದ ರೀತಿಯಲ್ಲಿ ಬಳಸಲಾಗುತ್ತಿಲ್ಲ. ಕೇವಲ ಶೇ.10 ರಷ್ಟು ಮಾತ್ರ ನೀರನ್ನು ಬಳಸಲಾಗುತ್ತಿದೆ.ಮಿಕ್ಕ ನೀರೆಲ್ಲಾ ಸಮುದ್ರ ಪಾಲಾಗುತ್ತಿದೆ. ಯಾವುದೇ ಕೆಲಸ ಮಾಡುವಾಗಲು ದಕ್ಷತೆ ಮುಖ್ಯ. ಕೃಷಿ ಕಾರ್ಯ ಎನ್ನುವುದು ದಕ್ಷತೆಯ ಪ್ರತೀಕ. ಅದರಲ್ಲಿಯೂ ಸಾಹಿತ್ಯ ಪರಿಷತ್ತು ಕೃಷಿಕರ ದಕ್ಷತೆ ಗುರುತಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರಶಸ್ತಿ ಸ್ವಿಕರಿಸಿದ ಎಸ್. ಕೃಷ್ಣೇಗೌಡ್ರು ಮಾತನಾಡಿ ಕೃಷಿಕನದು ಹೋರಾಟದ ಬದುಕು. ನಾನೂ ಹೋರಟದ ಮೂಲಕವೇ ಕೃಷಿಯಲ್ಲಿ ಸಾಧನೆ ಮಾಡಿದ್ದೇನೆ, ಕೃಷಿಗಾಗಿ ಜೈಲುವಾಸವನ್ನೂ ಮಾಡಿದ್ದೇನೆ. ಯಾವುದೇ ಸಾಧನೆ ಮಾಡಲು ಮನೆಯವರ ಸಹಾಕರದ ಅವಶ್ಯಕತೆ ಇದೆ ಎಂದರು. ಜಿ.ಎನ್. ನಾರಾಯಣಸ್ವಾಮಿ ಮಾತನಾಡಿ ಕೃಷಿಕ ಕೇಲವ ಕೃಷಿಯನ್ನು ನಂಬಿದರೆ ಸಾಲದು ಬದಲಿಗೆ ಪರ್ಯಾಯ ವ್ಯವಹಾರ ಮಾಡಲೇ ಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ ಎಂದರು.

ದತ್ತಿ ದಾನಿ ಡಾ.ಚಿಕ್ಕಕೊಮಾರಿಗೌಡ ಮಾತನಾಡಿ ದಾನಿಗಳು ನೀಡುವ ಪ್ರಶಸ್ತಿಗಳು ಸೂಕ್ತ ವ್ಯಕ್ತಿಗಳಿಗೆ ಸಿಗಬೇಕು ಎನ್ನುವುದು ಎಲ್ಲಾ ದಾನಿಗಳಿಗೆ ಇರುತ್ತದೆ. ಈ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಚಾಚು ತಪ್ಪದೆ ಮಾಡುತ್ತಿದೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಸ್ವಾಗತಿಸಿ ವಂದಿಸಿದರು. ಕಸಾಪ ಕೋಶಾಧ್ಯಕ್ಷ ಬಿ.ಎಂ. ಪಟೇಲ್ಪಾಂಡು ಅವರು ಕಾಯಕ್ರಮ ನಿರೂಪಿಸಿದರು.
ಸ್ವಾಮೀಜಿಗಳು ತಲೆಯ ಮೇಲೆ ಖಾವಿ ಬಟ್ಟೆ ಹಾಕಿಕೊಳ್ಳುತ್ತಾರೆ; ಅದನ್ನೂ ಪ್ರಶ್ನೆ ಮಾಡ್ತೀರಾ?; ಸಿದ್ದರಾಮಯ್ಯ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button