ಕೀವ್ – ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ವಿಶ್ವದಾದ್ಯಂತ ಅನೇಕ ದೇಶಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನ ಟೀಕಿಸಿದ್ದು, ಯುದ್ಧ ಮುಗಿಸಲು ಒತ್ತಡ ಹೇರುತ್ತಿವೆ.
ಇದೀಗ ಯುದ್ಧದ ಒತ್ತಡಕ್ಕೆ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೋಯಿಗೆ ಹೃದಯಾಘಾತವಾಗಿದೆ ಎಂದು ಉಕ್ರೇನ್ ಸಚಿವ ಆಂಟನ್ ಹೆರಾಶ್ಚೆಂಕೊ ತಿಳಿಸಿದ್ದಾರೆ.
ಸೆರ್ಗಿ ಕೊನೆಯದಾಗಿ ಮಾರ್ಚ್ 24ರಂದು ಟಿವಿಯಲ್ಲಿ ಕಾಣಿಸಿಕೊಂಡರು. ಉಕ್ರೇನ್ ವಿರುದ್ಧದ ಯುದ್ಧದ ಎರಡನೇ ಮಾಸ್ಟರ್ ಮೈಂಡ್ʼಗಳೆಂದು ಕರೆಯಲ್ಪಡುವ ಸೆರ್ಗಿ ಮತ್ತು ರಷ್ಯಾ ಅಧ್ಯಕ್ಷ
ಪುಟಿನ್ ವಾದ ಮಂಡಿಸಿದ್ದರು. ಆಗ ಸೆರ್ಗಿ ಶೋಯಿಗ ಹೃದಯಾಘಾತಕ್ಕೆ ಒಳಗಾದರು ಎಂದು ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ