Kannada NewsKarnataka NewsLatest

ಜಂಗೀ ಕುಸ್ತಿ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ; ಯುವಕರ ಉತ್ಸಾಹಕ್ಕೆ ಫಿದಾ ಆದ ಶಾಸಕ, ಪ್ರಥಮ ಬಹುಮಾನ ಪ್ರಾಯೋಜಕತ್ವ ಘೋಷಣೆ​

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ ಎಚ್ ಗ್ರಾಮದ ಶ್ರೀ ಬಾಲ ಹನುಮಾನ ತಾಲಿಮ ಮಂಡಳ ಹಾಗೂ ಕುಸ್ತಿ ಸಂಘಟನಾ ಇವರ​ ಸಂಯುಕ್ತ​ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಂಗೀ ಕುಸ್ತಿ​ಪಂದ್ಯಾವಳಿಯನ್ನು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ​ದರು.
ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ​ ಕುಸ್ತಿ ಪಂದ್ಯಾವಳಿಯ​ ಪ್ರಥಮ ಬಹುಮಾನವನ್ನು ಘೋಷಿಸಿದ ಚನ್ನರಾಜ ಹಟ್ಟಿಹೊಳಿ, ಗ್ರಾಮೀಣ ಕ್ರೀಡೆಗಳಿಗೆ​ ಕ್ಷೇತ್ರದಲ್ಲಿ​ ಆದ್ಯತೆಯನ್ನು ನೀಡಲಾಗುತ್ತಿದೆ​ ಎಂದರು​.
​ಗ್ರಾಮೀಣ ಯುವಕರ ಉತ್ಸಾಹ ಕಂಡು ಖುಷಿಯಾಗುತ್ತಿದೆ. ನಿಮ್ಮ ಖುಷಿಯಲ್ಲಿ ಭಾಗಿಯಾಗಲು ನನಗೂ ಸಂತೋಷವೆನಿಸುತ್ತಿದೆ. ನಿಮ್ಮೆಲ್ಲ ಚಟುವಟಿಕೆಯಲ್ಲಿ ನಾವು ಜೊತೆಯಾಗಿರುತ್ತೇವೆ. ಸದಾ ಕ್ರಿಯಾಶೀಲ ಚಟುವಟಿಕೆಯನ್ನು ಮುಂದುವರಿಸಿ ಎಂದು ಅವರು ಹುರುದುಂಬಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ ಅಧ್ಯಕ್ಷ ಯಲ್ಲಪ್ಪ ಗವಳಿ, ಮನೋಹರ ಪಾಟೀಲ, ಬಾಳು ಪಾಟೀಲ, ಬಾಹು ಬೆನಾಳ್ಕರ್, ಮಾಜಿ ಸೈನಿಕ ಕಿಶನ್ ಪಾಟೀಲ, ಒಲಂಪಿಕ್ ಪಟು ಎಮ್ ಆರ್ ಪಾಟೀಲ, ಮನೋಹರ ಬೆಳಗಾಂವ್ಕರ್, ಸಾಗರ ಪಾಟೀಲ, ಬಾಳು ದೇಸೂರಕರ್, ವಿಶಾಲ ಬೋಸಲೆ, ರಾಹುಲ್ ಪಾಟೀಲ,  ದತ್ತಾ ಪಾಟೀಲ, ಅಡಿವೆಪ್ಪ ಹತ್ತರಗಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button