Latest

ಬಿಹಾರ್ ಮುಖ್ಯಮಂತ್ರಿ ನಿತಿಶ್‌ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

ಪ್ರಗತಿ ವಾಹಿನಿ ಸುದ್ದಿ ಪಾಟ್ನಾ :

ಬಿಹಾರ್ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ ಘಟನೆ ಭಕ್ತಿಯಾರ್‌ಪುರದಲ್ಲಿ ಭಾನುವಾರ ನಡೆದಿದೆ.

Home add -Advt

ಭಕ್ತಿಯಾರ್‌ಪುರ ನಿತೀಶ್‌ಕುಮಾರ್ ಅವರ ತವರು ಜಿಲ್ಲೆಯಾಗಿದ್ದು, ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಿತೀಶ್‌ಕುಮಾರ್ ಅಲ್ಲಿಗೆ ತೆರಳಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ವೇದಿಕೆ ಏರಿದ ವ್ಯಕ್ತಿಯೊಬ್ಬ ನಿತೀಶ್ ಕುಮಾರ್ ಅವರಿಗೆ ಹೊಡೆದಿದ್ದಾನೆ.

ಆದರೆ ಘಟನೆಯಲ್ಲಿ ನಿತೀಶ್‌ಕುಮಾರ್ ಅವರಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ಪಾಟ್ನಾ ಪೊಲೀಸರು ತಿಳಿಸಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕೆಜಿಎಫ್-2 ಟ್ರೇಲರ್ ರಿಲೀಸ್

Related Articles

Back to top button