Latest
ರ್ಯಾಂಪ್ ವಾಕ್ ಮಾಡಿ ಶೋ ನ ಟಾಪರ್ ಆಗಿ ಹೊರ ಹೊಮ್ಮಿದ ಸಂಸದ

ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಲ್ಯಾಕ್ಮೇ ಫ್ಯಾಶನ್ ಶೋನಲ್ಲಿ ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾ ರ್ಯಾಂಪ್ ವಾಕ್ ಮಾಡಿ ಗಮನ ಸೆಳೆದಿದ್ದಾರೆ. ಅಲ್ಲದೇ ಅವರು ಶೋ ನ ಟಾಪರ್ ಆಗಿಯೂ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಆಮ್ ಆದ್ಮಿ ಪಕ್ಷದಿಂದ ರಾಜ್ಯ ಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿರುವ ೩೩ ವರ್ಷದ ರಾಘವ್ ಚಡ್ಡಾ ಮಾಡೆಲ್ ವೃತ್ತಿಯಲ್ಲಿದ್ದವರು. ಲ್ಯಾಕ್ಮೇ ಫ್ಯಾಶನ್ ಶೋನಲ್ಲಿ ಅವರಿಗೆ ವಸ್ತ್ರ ವಿನ್ಯಾಸಕಾರ ಪವನ್ ಸಚದೇವ್ ವಸ್ತ್ರ ವಿನ್ಯಾಸ ಮಾಡಿದ್ದರು.
ರ್ಯಾಂಪ್ ಮೇಲೆ ಅವರು ನಟ ಅಪರ್ಶಕ್ತಿ ಖುರಾನಾ ಅವರೊಂದಿಗೆ ವಾಕ್ ಮಾಡಿದ್ದು ವೀಕ್ಷಕರನ್ನು ಬಹುವಾಗಿ ಆಕರ್ಷಿಸಿದೆ. ಅಲ್ಲದೆ ರಾಘವ್ ಅವರ ರ್ಯಾಂಪ್ ಮೇಲಿನ ವಾಕ್ನ ವಿಡಿಯೋ ಸಹ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರ್ ಮುಖ್ಯಮಂತ್ರಿ ನಿತಿಶ್ಕುಮಾರ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ




