Kannada NewsKarnataka News

ನೀರು ಸರಿಯಾಗಿ ಪೂರೈಕೆ ಮಾಡದಿದ್ದರೆ ಗಿಡಕ್ಕೆ ಕಟ್ಟಿ ಹಾಕ್ತಿನಿ – ಬೆನಕೆ ಎಚ್ಚರಿಕೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 
ಬೆಳಗಾವಿ ನಗರದಲ್ಲಿ ಕಳೆದ ಒಂದು ವಾರದಿಂದ ಸಮರ್ಪಕವಾಗಿ ಸರಿಯಾಗಿ ಪೂರೈಕೆ ಆಗುತ್ತಿಲ್ಲವಾದ್ದರಿಂದ ಸೋಮವಾರದಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಮಹಾನಗರ ಪಾಲಿಕೆಯಲ್ಲಿ ಎಲ್ ಆಂಡ ಟಿ ಕಂಪನಿಯ ಅಧಿಕಾರಿಗಳ ಜೊತೆಗೆ ತುರ್ತು ಸಭೆ ಕರೆದರು. ಸಭೆಯಲ್ಲಿ ನಗರಸೇವಕರು ಹಾಗೂ ಸಾರ್ವಜನಿಕರು ಎಲ್ ಆಂಡ ಟಿ ಕಂಪನಿ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಈ ಸಂದರ್ಭದಲ್ಲಿ ಎಲ್ ಆಂಡ ಟಿ ಕಂಪನಿ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿದ ಶಾಸಕರು ನೀರಿನ ಸಮಸ್ಯೆ ಪರಿಹರಿಸುವ ಸಂಬಂಧ ಈಗಾಗಲೆ ಹತ್ತು ಬಾರಿ ಸಭೆ ಮಾಡಿದ್ದೇವೆ. ಐದೇ ಟ್ಯಾಂಕರಗಳಿವೆ, ಇನ್ನುಳಿದ ಟ್ಯಾಂಕರಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದರು.

ಒಂದು ಕಡೆ ೧೨ ದಿನ ನೀರು ಬಂದಿಲ್ಲ, ಮತ್ತೊಂದು ಕಡೆ ೨೦ ದಿನಗಳಿಂದ ನೀರು ಬಿಟ್ಟಿಲ್ಲ. ಹೀಗೆ ಆದರೆ ಜನರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಹಿಡಕಲ್ ಡ್ಯಾಮನಲ್ಲಿ ನೀರು ಬೇಕಾದಷ್ಟು ಇದೆ, ನೀರು ಇಲ್ಲ ಅಂದ್ರೆ ಬೇರೆ ಮಾತು, ಅಲ್ಲದೆ ೨೦ ಕೋಟಿ ರೂಪಾಯಿ ಖರ್ಚು ಮಾಡಿ ಪಂಪ್ ಸೆಟ್ ಅಳವಡಿಸಿದ್ದೇವೆ. ಇಷ್ಟೆಲ್ಲಾ ಮಾಡಿದರು ಸರಿಯಾಗಿ ನೀರು ಪೂರೈಸುವುದಿಲ್ಲ ಅಂದರೆ ಹೇಗೆ ? ಕೆಲಸ ಆಗೋದಿಲ್ಲ ಎಂದು ಯಾಕೆ ನೀವು ಹೇಳುತ್ತಿರಿ, ನೀವು ದುಡ್ಡು ಹಾಕಿ ಹೆಚ್ಚಿಗೆ ಜನರನ್ನು ಕೆಲಸಕ್ಕೆ ಹಚ್ಚಿ ಅದು ನಮಗೆ ಸಂಬಂಧವಿಲ್ಲ. ಆದರೆ ಸಾರ್ವಜನಿಕರಿಂದ ನಮಗೆ ಏನಾದ್ರೂ ತಕರಾರು ಕೇಳಿ ಬಂದರೆ ನಿಮ್ಮನ್ನು ಗಿಡಕ್ಕೆ ಕಟ್ಟಿ ಹಾಕ್ತಿನಿ ಎಂದು ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ನಗರ ಸೇವಕರು, ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕಿತ್ತೂರು ಕರ್ನಾಟಕಕ್ಕೆ ಭಾಗ್ಯದ ಬಾಗಿಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button