Kannada NewsLatest

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ತತ್ವಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಒಳ್ಳೆಯ ನಾಗರಿಕರನ್ನಾಗಿಸಲು ಶ್ರಮಿಸಬೇಕು ಎಂದು ಬೆಳಗಾವಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷರು ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಗಜಾನನ ಮಣ್ಣಿಕೇರಿ ಕರೆ ನೀಡಿದರು.

ಪಟ್ಟಣದ ಸರಕಾರಿ  ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ  “ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೋವಿಡ -19 ಹಿನ್ನಲೇಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ ತರಬೇತಿಗಳು ಸ್ಥಗಿತಗೊಂಡಿರಿಂದ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ ವಿಚಾರ ಬಗ್ಗೆ ತಿಳುವಳಿಕೆ ಸ್ವಲ್ಪ ಕಡಿಮೆಯಾಗಿತ್ತು, ಸದ್ಯ ಕೋವಿಡ್ ನಿಯಂತ್ರಣಕ್ಕೆ ಬಂದಿದರಿಂದ ಮತ್ತೆ ಮುಂದಿನ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುವದರಿಂದ ಮಕ್ಕಳಿಗೆ ಪೂರಕವಾದ ಮಾಹಿತಿ ನಿಡುವ ಅಗತ್ಯವಾಗಿರುವದರಿಂದ ಬೇಸಿಗೆಯಲ್ಲಿ 4 ರಿಂದ 12 ದಿನಗಳವರಿಗೆ ಅಗತ್ಯಕ್ಕೆ ತಕ್ಕಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ತತ್ವದ ಚಟುವಟಿಕೆಗಳು ಮತ್ತು ಬೇರೆ ಬೇರೆ ತರಬೇತಿಗಳನ್ನು ನೀಡುವ ಮೂಲಕ ಮಕ್ಕಳಿಗೆ ಮತಷ್ಟು ಮನದಟ್ಟಾಗಿ ಮಾಡಿಕೊಳ್ಳುವ ಬ್ರಿಜ್ಜಕೋರ್ಸ ಮಾದರಿಯ ತರಬೇತಿ ಇದ್ದಾಗಿರುತ್ತದೆ ಕಾರಣ ತರಬೇತಿಯ ಸೌಲಭ್ಯವನ್ನು ಎಲ್ಲ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕೆಂದ ಅವರು ಶಾಲೆಯು ಹಮ್ಮಿಕೊಳ್ಳುತ್ತಿರುವ ಸ್ಕೌಟ್ಸ್ ಗೈಡ್ಸ್ ಮತ್ತು ಶಾಲಾ ಅಭಿವೃದ್ಧಿಪರ ಕಾರ್ಯಗಳು ಪ್ರಶಂಶಾರ್ಹವಾಗಿವೆ ಎಂದರು.

ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಕೋಪರ್ಡೆ ಮತ್ತು ಶಿಕ್ಷಕರು ಗಜಾನನ ಮಣ್ಣಿಕೇರಿ ಅವರನ್ನು ಸತ್ಕರಿಸಿ ಮಾತನಾಡಿ, ಸರಕಾರಿ  ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಸರಕಾರದ ಸೌಲಭ್ಯ ಮತ್ತು ಸಾರ್ವಜನಿಕರ ಹಾಗೂ ದಾನಿಗಳ ಸಹಕಾರದಿಂದ ಮಕ್ಕಳ ಸಂಖ್ಯೆಯಲ್ಲಿ  ಹೆಚ್ಚಳವಾಗಿದೆ ಎಂದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಬಿ.ಆರ್.ತರಕಾರ, ಸ್ಕೌಟ್ಸ್ ಗೈಡ್ಸ್ ಕಾರ್ಯದರ್ಶಿ ಬಸವರಾಜ ನಿಡೋಣಿ, ಶಾಲಾ ಸ್ಕೌಟ್ಸ್ ಗೈಡ್ಸ ಶಿಕ್ಷಕಿ  ಕಮಲ ಚಂದಗಡೆ, ಸಿ.ಆರ್.ಪಿ ಶಮಿರ ದಬಾಡಿ, ಶಿಕ್ಷಕರಾದ  ಆರ್.ಎಲ್ ಲಮಾಣಿ, ಎಸ್.ವಿ.ಸೋಮವ್ವಗೋಳ, ಶಿಕ್ಷಕಿಯರಾದ ಅರ್ಚನಾ ಮಹೇಂದ್ರಕರ, ಸೈರಾಬಾನು ಬಾಗವಾನ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪಠ್ಯದಿಂದ ಟಿಪ್ಪು ವಿಚಾರ ಕೈಬಿಡುವ ವಿಚಾರ: ಶಿಕ್ಷಣ ಸಚಿವರ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button