Latest

ಶೀಘ್ರದಲ್ಲಿ ಬಂದ್ ಆಗಲಿವೆ ಕೋವಿಡ್ ಜಾಗೃತಿ ಕಾಲರ್ ಟ್ಯೂನ್‌ಗಳು

ಪ್ರಗತಿ ವಾಹಿನಿ ಸುದ್ದಿ; ನವದೆಹಲಿ: ಬೆಂಗಳೂರು: ಕಳೆದ 2 ವರ್ಷಗಳಿಂದ ಮೊಬೈಲ್ ಕರೆ ಮಾಡಿದಾಗ ಕೇಳಿ ಬರುತ್ತಿದ್ದ ಕೋವಿಡ್-19 ಜಾಗೃತಿ ಕಾಲರ್ ಟ್ಯೂನ್‌ಗಳು ಶೀಘ್ರದಲ್ಲಿ ಬಂದ್ ಆಗಲಿವೆ ಎಂದು ಮೂಲಗಳು ತಿಳಿಸಿವೆ.

2020ರ ಮಾರ್ಚ್ನಲ್ಲಿ ದೇಶದಲ್ಲಿ ಕೋವಿಡ್ ಉಲ್ಬಣವಾದಾಗ ಜನ ಜಾಗೃತಿ ಮೂಡಿಸುವ ಸಲುವಾಗಿ ದೇಶದ ಎಲ್ಲ ಟೆಲಿಕಾಂ ಕಂಪನಿಗಳಿಗೆ ಕೋವಿಡ್ ಸೋಂಕಿನ ಜಾಗೃತಿಯ ಸಂದೇಶ ಸಾರುವ ಕಾಲರ್ ಟ್ಯೂನ್‌ಗಳನ್ನು ಕರೆ ಮಾಡಿದವರಿಗೆ ಕೇಳುವಂತೆ ಅಳವಡಿಸಲು ಆದೇಶ ನೀಡಲಾಗಿತ್ತು. ಪ್ರಾರಂಭದಲ್ಲಿ ರಾಷ್ಟ್ರ ಮಟ್ಟದಲ್ಲಿ ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ಇದಕ್ಕೆ ಧ್ವನಿ ನೀಡಿದ್ದರು.

ಆರಂಭದಲ್ಲಿ ಕಾಲರ್ ಟ್ಯೂನ್‌ಗಳಲ್ಲಿ ಅಮಿತಾಬ್ ಬಚ್ಚನ್ ಅವರ ಧ್ವನಿಯಲ್ಲಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಸಂದೇಶ ಬಿತ್ತರವಾಗುತ್ತಿತ್ತು.

ಬಳಿಕ ಕೋವಿಡ್ ಲಸಿಕೆಯ ಕುರಿತಾದ ಜಾಗೃತಿ ಸಂದೇಶ ಪ್ರಸಾರವಾಗುತ್ತಿತ್ತು. ಇತ್ತೀಚೆಗೆ ಕೋವಿಡ್ ವ್ಯಾಕ್ಸಿನೇಶನ್ 100 ಕೋಟಿ ತಲುಪಿದ ಬಗ್ಗೆಯೂ ಕಾಲರ್ ಟ್ಯೂನ್‌ನಲ್ಲಿ ಮಾಹಿತಿ ಬಿತ್ತರವಾಗುತ್ತಿತ್ತು.

ಕೋವಿಡ್ ಜಾಗೃತಿಯ ಸಂದೇಶ ಸಾಕು ಎಂದು ನಿರ್ಧರಿಸಿರುವ ಸರಕಾರ ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ಜಾಗೃತಿ ಸಂದೇಶದ ಕಾಲರ್ ಟ್ಯೂನ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಮಟ್ಟದ ಈಜುಪಟುಗಳಿಂದ ಸಾಮೂಹಿಕ ಅತ್ಯಾಚಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button