ಪ್ರಗತಿವಾಹಿನಿ ಸುದ್ದಿ; ರಾಯ್ ಪುರ: ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಮದುವೆಗೂ ಮೊದಲು ಹಾಗೂ ಮದುವೆಯ ನಂತರ ಹಲವು ರೀತಿಯ ಖರ್ಚುಗಳಿರುತ್ತವೆ. ಆ ನಿಟ್ಟಿನಲ್ಲಿ ಅವಿವಾಹಿತ ಮಗಳು ಪೋಷಕರಿಂದ ಮದುವೆ ಖರ್ಚು ಪಡೆಯಬಹುದು ಎಂದು ಛತ್ತೀಸ್ ಗಢ ಹೈಕೋರ್ಟ್ ತೀರ್ಪು ನೀಡಿದೆ.
ಹೆಣ್ಣುಮಕ್ಕಳು ತಮ್ಮ ಮದುವೆಗೆ ಪೋಷಕರಿಂದ ಹಣ ಪಡೆಯಬಹುದು ಎಂಬ ಬಗ್ಗೆ ಹಕ್ಕುಗಳಿವೆ. ಈ ವಿಚಾರವಾಗಿ ಪ್ರತಿಪಾದಿಸಿದಾಗ ನ್ಯಾಯಾಲಯ ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿವಾಹದ ಉದ್ದೇಶಕ್ಕಾಗಿ ಅವಿವಾಹಿತ ಮಗಳೊಬ್ಬರು ಪೋಷಕರಿಂದ 25 ಲಕ್ಷ ರೂಪಾಯಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವಿವಾಹಿತ ಮಗಳು ತನ್ನ ತಂದೆ-ತಾಯಿಯಿಂದ ಮದುವೆ ವೆಚ್ಚ ಪಡೆಯಬಹುದು ಎಂದು ತೀರ್ಪು ನೀಡಿದೆ.
ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ-1956ರ ಅಡಿಯಲ್ಲಿ ಅವಿವಾಹಿತ ಮಗಳು ತನ್ನ ಮದುವೆಯ ವೆಚ್ಚವನ್ನು ಪೋಷಕರಿಂದ ಪಡೆದುಕೊಳ್ಳಬಹುದು ಎಂದು ಅರ್ಜಿದಾರರ ಪರ ವಕೀಲ ಎ.ಕೆ.ತಿವಾರಿ ವಾದಿಸಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-2021 ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ