Kannada NewsKarnataka News

ಬೆಳಗಾವಿ ಬಳಿ ಗುಂಪು ಘರ್ಷಣೆ: ಓರ್ವ ಸಾವು, 7 ಜನರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಗೆ ಸಮೀಪದ ಕರಡಿಗುಡ್ಡದ ಬಳಿ  ಗುಂಪು ಘರ್ಷಣೆ ನಡೆದಿದ್ದು, ಓರ್ವ ಯುವಕ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ 7 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ  ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಮುದಕಪ್ ಅಂಗಡಿ ಎನ್ನುವ 25 ವರ್ಷದ ಯುವಕ ಮೃತನಾಗಿದ್ದಾನೆ. ವಿಠ್ಠಲ, ಸುನೀಲ್, ಲಕ್ಕಪ್ಪ,ಬರ್ಮಾಜ್, ವಿಶಾಲ ಮೊದಲಾದವರು ಗಾಯಗೊಂಡಿದ್ದಾರೆ.

Home add -Advt

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ: ತಮ್ಮನನ್ನು ಕಡಿದು ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ

Related Articles

Back to top button