ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ನಿರ್ನಯವನ್ನು ಸ್ಪೀಕರ್ ವಜಾಗೊಳಿಸಿದ್ದಾರೆ. ಇಮ್ರಾನ್ ಖಾನ್ ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ವಜಾಗೊಳಿಸಿದ ಸ್ಪೀಕರ್ ಆರೀಫ್ ಅಲ್ವಿ, ಸಧ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸುವಂತೆ ಸೂಚಿಸಿದ್ದಾರೆ. ಆದರೆ ಸಂಸತ್ ನಲ್ಲಿ ಗಲಾಟೆ ಹಿನ್ನೆಲೆಯಲ್ಲಿ ಕಲಾಪವನ್ನು ಏಪ್ರಿಲ್ 25ರವರೆಗೆ ಮುಂದುಡಲಾಗಿದೆ. ಪಾಕ್ ಸರ್ಕಾರದ ಭವಿಷ್ಯ ಇನ್ನೂ ಇತ್ಯರ್ಥವಾಗಿಲ್ಲ ಎನ್ನಲಾಗಿದೆ.
ಇಂದು ನಡೆದ ಪಾಕಿಸ್ತಾನ ಸಂಸತ್ ಕಲಾಪದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಗೈರಾಗಿದ್ದಾರೆ.
ಇಂದೇ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಮತದಾನ ; ಅವಿಶ್ವಾಸ ನಿರ್ಣಯವನ್ನೂ ಒಪ್ಪಿಕೊಳ್ಳಲ್ಲ ಎಂಬ ಭಂಡ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ