![](https://pragativahini.com/wp-content/uploads/2019/07/accident1.jpg)
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಟೊಂಗೆಯನ್ನು ತೆರವುಗೊಳಿಸುತ್ತಿದ್ದ ಪೊಲೀಸರು ಹಾಗೂ ಸಾರ್ವಜನಿಕರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾನ್ಸ್ ಟೇಬಲ್ ಹಾಗೂ ಇಬ್ಬರು ಸ್ಥಳೀಯರು ಮೃತಪಟ್ಟ ಘಟನೆ ಧಾರವಡ ಜಿಲ್ಲೆಯ ಕಲಘಟಗಿ ತಾಲೂಕಿನ ಅಂಚಟಗೇರಿ-ಚಳಮಟ್ಟಿ ಕ್ರಾಸ್ ಬಳಿ ನಡೆದಿದೆ.
ರಾತ್ರಿ 9:30ರ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲಘಟಗಿ ಠಾಣೆಯ ಪೊಲೀಸ್ ಪೇದೆ ಪಂಡಿತ್ ಕಾಸರ್ (28), ಗಂಗಿವಾಳ ಗ್ರಾಮದ ಶಿವಲಿಂಗಪ್ಪ ಕಲಬುರ್ಗಿ ಹಾಗೂ ಹನುಮಂತಪ್ಪ ಕಲಬುರ್ಗಿ ಮೃತರು.
ಲಾರಿ ಅಪಘಾತದಲ್ಲಿ ಇಬ್ಬರು ಕಾನ್ಸ್ ಟೇಬಲ್ ಗಳು ಹಾಗೂ ಮತ್ತಿಬ್ಬರು ಸ್ಥಳೀಯರು ಗಾಯಗೊಂಡಿದ್ದಾರೆ. ಕಾನ್ಸ್ ಟೇಬಲ್ ಗಳಾದ ನೇತಾಜಿ ಎಸ್.ವಾಘ್, ಶಂಕರ ಬೇವಿನಮರದ, ಸ್ಥಳೀಯರಾದ ರವಿ ವಾಲಿಕರ, ಸಿದ್ದಪ್ಪ ಗುಡ್ಡಪ್ಪನವರ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ