Latest

ಅಣಬೆಗಳು ಪರಸ್ಪರ ಮಾತಾಡುತ್ತವೆ. ಈ ಭಾಷೆ ಮಾನವರ ಭಾಷೆಯನ್ನೇ ಹೋಲುತ್ತವೆ: ಅಚ್ಚರಿಯ ಸಂಗತಿ ಅನ್ವೇಷಿಸಿದ ವಿಜ್ಞಾನಿಗಳು

 

ಲಂಡನ್ –

ಅಣಬೆಗಳು ಪರಸ್ಪರ ಮನುಷ್ಯರಂತೆಯೇ ಮಾತಾಡುತ್ತವೆ ಎಂಬ ಅಚ್ಚರಿಯ ವಿಷಯವೊಂದನ್ನು ವಿಜ್ಞಾನಿಗಳು ಅನ್ವೇಷಣೆ ಮಾಡಿದ್ದು ರಾಯಲ್ ಸೊಸೈಟಿ ಓಪನ್ ಸೈನ್ಸ್ ನಿಯತ ಕಾಲಿಕದಲ್ಲಿ ಈ ಸಂಶೋಧನೆಯ ಕುರಿತು ಪ್ರಕಟವಾಗಿದೆ.

೪ ಜಾತಿಯ ಅಣಬೆಗಳು ಪರಸ್ಪರ ಸಂವಹನ ನಡೆಸುವುದನ್ನು ಇಂಗ್ಲೆಂಡ್‌ನ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಗೋಸ್ಟ್ ಫಂಗಿ, ಸ್ಪ್ಲಿಟ್ ಗಿಲ್ ಫಂಗಿ, ಎನೋಕಿ ಫಂಗಿ ಮತ್ತು ಕ್ಯಾಟರ್‌ಫಿಲ್ಲರ್ ಫಂಗಿ ಎಂಬ ನಾಲ್ಕು ತಳಿಯ ಅಣಬೆಗಳು ಪರಸ್ಪರ ಸಂವಹನ ನಡೆಸುವುದನ್ನು ವಿಜ್ಞಾನಿಗಳು ಸಂಶೋಧನೆಯ ಮೂಲಕ ಖಚಿತಪಡಿಸಿದ್ದಾರೆ.

ಸಂಶೋಧನೆಯಲ್ಲಿ ಅಣಬೆಗಳ ನಡುವೆ ಇಲೆಕ್ಟ್ರಿಕಲ್ ಸಿಗ್ನಲ್‌ಗಳು ಹಂಚಿಕೆಯಾಗುತ್ತಿರುವುದನ್ನು ವಿಜ್ಞಾನಿಗಳು ಗುರಿತಿಸಿದ್ದಾರೆ. ೦.೩ರಿಂದ ೨.೧ ಮೆಗಾ ವೋಲ್ಟ್ ಆಂಪ್ಟಿಟ್ಯೂಡ್‌ನಲ್ಲಿ ವಿದ್ಯುತ್ ಕಾಂತೀಯ ಅಲೆಗಳು ಅಣಬೆಗಳ ನಡುವೆ ಪರಸ್ಪರ ಹಂಚಿಕೆಯಾಗಿದ್ದು ಕಂಡುಬಂದಿದೆ.

ಇದರ ಆಧಾರದಲ್ಲಿ ಅಣಬೆಗಳು ಸುಮಾರು ೫೦ ಶಬ್ದಗಳನ್ನು ಗುರುತಿಸಬಲ್ಲವು, ಆ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತವೆ ಎಂದು ಕಂಡು ಹಿಡಿದಿದ್ದಾರೆ. ಅಣಬೆಗಳ ನಡುವಿನ ಸಂವಹನವನ್ನು ಮಾನವರ ಭಾಷೆಗೆ ಪರಿವರ್ತಿಸುವ ಸಂಶೋಧನೆಯಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಇದು ಯಶಸ್ವಿಯಾದಲ್ಲಿ ಅಣಬೆಗಳು ಪರಸ್ಪರ ಹಂಚಿಕೊಳ್ಳುವ ಭಾವನೆಗಳು ಏನೆಂಬುದು ಗೊತ್ತಾಗಲಿದೆ ಎಂಬ ಕುತೂಹಲ ಕೆರಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button