
ಪ್ರಗತಿ ವಾಹಿನಿ ಸುದ್ದಿ ಭೋಪಾಲ್ –
೧೦ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್ ಆದರೆ ಅಪ್ಪ ಶಿಕ್ಷಿಸುತ್ತಾನೆಂಬ ಹೆದರಿಕೆಯಿಂದ ಅಪ್ಪನನ್ನೇ ಕೊಂದ ಘಟನೆ ಮಧ್ಯಪ್ರದೇಶದ ಗುಣಾದಲ್ಲಿ ನಡೆದಿದೆ.
ಗುಣಾದ ಔಷಧ ಅಂಗಡಿಯೊಂದರ ಮಾಲೀಕ ೪೬ ವರ್ಷದ ವ್ಯಕ್ತಿ ಮಗನಿಂದಲೇ ಕೊಲೆಯಾದವರು. ೧೫ ವರ್ಷ ವಯಸ್ಸಿನ ಮಗ ೧೦ನೇ ತರಗತಿ ಓದುತ್ತಿದ್ದು ಪರೀಕ್ಷೆಯಲ್ಲಿ ಫೇಲ್ ಆದರೆ ಮನೆಯಿಂದ ಹೊರ ಹಾಕುವುದಾಗಿ ಅಪ್ಪ ಹೆದರಿಸಿದ್ದ. ಇದರಿಂದ ಕಂಗಾಲಾಗಿದ್ದ ಮಗ ಕೊಡಲಿಯಿಂದ ಕಡಿದು ಅಪ್ಪನನ್ನೇ ಸಾಯಿಸಿಬಿಟ್ಟಿದ್ದಾನೆ.
ಅಲ್ಲದೇ ಪೊಲೀಸ್ ತನಿಖೆಯ ವೇಳೆ ಕೊಡಲಿಯ ಮೇಲಿನ ಬೆರಳ ಗುರುತು ತನ್ನ ಕೈ ಬೆರಳ ಗುರುತಿಗೆ ಹೋಲಬಾರದೆಂದು ಬೆರಳುಗಳನ್ನು ಬೆಂಕಿಯಿಂದ ಸುಟ್ಟುಕೊಂಡಿದ್ದಾನೆ.
ಬಾಲಕನನ್ನು ಬಾಲಪಾಧ ಕಾಯ್ದೆಯಡಿ ಕಸ್ಟಡಿಗೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗುಣಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲುಂಗಿ ಡ್ಯಾನ್ಸ್ ಖ್ಯಾತಿಯ ಯೋ ಯೋ ಹನಿಸಿಂಗ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ