Latest

ಆಭರಣ ಪ್ರಿಯರಿಗೆ ಬಿಗ್ ಶಾಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ದಿನಗಳಿಂದ ದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ದಿಢೀರ್ ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಒಂದೇ ದಿನ 4800ರೂ ಏರಿಕೆಯಾಗಿದೆ.

ಭಾರತದಲ್ಲಿ ಇಂದು 22ಕ್ಯಾರಟ್ 10ಗ್ರಾಂ ಚಿನ್ನ 48,000 ರೂ ಆಗಿದೆ. 24 ಕ್ಯಾರಟ್ ಚಿನ್ನದ ದರ 52,140ರೂ ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ48,000 ರೂ ಇದೆ. 24 ಕ್ಯಾರೆಟ್ ಚಿನ್ನ 52,370 ರೂಪಾಯಿ ಆಗಿದೆ.

ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,590 ರೂ. ಮುಂಬೈ- 48,000 ರೂ, ದೆಹಲಿ- 48,000 ರೂ, ಕೊಲ್ಕತ್ತಾ- 48,000 ರೂ, ಹೈದರಾಬಾದ್- 48,000 ರೂ, ಪುಣೆ- 48,100 ರೂ ಆಗಿದೆ.

24 ಕ್ಯಾರೆಟ್ ಚಿನ್ನ ಚೆನ್ನೈ- 53,010 ರೂ, ಮುಂಬೈ- 52,370 ರೂ, ದೆಹಲಿ- 52,370 ರೂ, ಕೊಲ್ಕತ್ತಾ- 52,370 ರೂ, ಹೈದರಾಬಾದ್- 52,370 ರೂ, ಪುಣೆ- 52,470 ರೂ, ಮೈಸೂರು- 52,370 ರೂ. ಆಗಿದೆ.

ಇಂದು ಬೆಳ್ಳಿ ದರದಲ್ಲಿ ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,000 ರೂ ಇದೆ. ಮುಂಬೈ, ಚೆನ್ನೈನಲ್ಲಿಯೂ ಇದೇ ದರ ನಿಗದಿಯಾಗಿದ್ದು, ದೆಹಲಿಯಲ್ಲಿ 66,300 ರೂ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button