Latest

ಇಮ್ರಾನ್ ಖಾನ್‌ಗೆ ನ್ಯಾಯಾಲಯದಲ್ಲಿ ಮುಖಭಂಗ

 ಅವಿಶ್ವಾಸ ನಿರ್ಣಯ ಎದುರಿಸಲು ಕೋರ್ಟ್ ಸೂಚನೆ

 ಇಸ್ಲಾಮಾಬಾದ್ – 

ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರ ದುರಾದೃಷ್ಟ ಮುಂದುವರೆದಿದೆ. ಹರಸಾಹಸಪಟ್ಟರೂ ಅವಿಶ್ವಾಸ ಮತದಾನ ತಪ್ಪಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ಅವಿಶ್ವಾಸ ಮತದಾನದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಪಾಕಿಸ್ತಾನ ಲೋಕಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಂಡಿದ್ದರು. ಇನ್ನೊಂದೆಡೆ ಚುನಾವಣೆ ಎದುರಿಸಲು ಸಜ್ಜಾಗುವಂತೆ ಇಮ್ರಾನ್ ಖಾನ್ ಕರೆ ನೀಡಿದ್ದರು.

ಈ ಕುರಿತು ವಿರೋಧಿ ಪಾಳಯದವರು ಪಾಕಿಸ್ತಾನ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಡೆಪ್ಯುಟಿ ಸ್ಪೀಕರ್ ನಿರ್ಣಯವನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿರುವ ಪಾಕಿಸ್ತಾನ ಸುಪ್ರಿಂ ಕೋರ್ಟ್, ಇಮ್ರಾನ್ ಖಾನ್ ಸರಕಾರಕ್ಕೆ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಲು ಆದೇಶ ನೀಡಿದೆ. ಏ.೯ರಂದು ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ. ಇದರಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಉಪಾಯ ಹೂಡಿದ್ದ ಇಮ್ರಾನ್ ಖಾನ್‌ಗೆ ತೀವ್ರ ಮುಖಭಂಗವಾಗಿದೆ. ಇನ್ನೊಂದೆಡೆ ಬಂಧನದ ಭೀತಿಯಲ್ಲಿರುವ ಇಮ್ರಾನ್ ಖಾನ್ ವಿದೇಶಕ್ಕೆ ಪಲಾಯನ ಮಾಡುತ್ತಾರೆ ಎಂಬ ವದಂತಿಯೂ ದಟ್ಟವಾಗಿದೆ.

ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ, ಸಿಬ್ಬಂದಿ ಮೇಲೆ ಎಸಿಬಿ ದಾಳಿ

Related Articles

Back to top button