Latest

ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ, ಸಿಬ್ಬಂದಿ ಮೇಲೆ ಎಸಿಬಿ ದಾಳಿ

ಚೆಕ್ ಪೋಸ್ಟ್‌ಗಳಲ್ಲಿ ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿದ್ದ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಸಿಬ್ಬಂದಿ ಮೇಲೆ ಎಸಿಬಿ ದಾಳಿ

 

ಪ್ರಗತಿ ವಾಹಿನಿ ಸುದ್ದಿ ಬೆಂಗಳೂರು –

ಬೆಂಗಳೂರಿನ ದೇವನಹಳ್ಳಿ ಸೇರಿದಂತೆ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ನೆಪದಲ್ಲಿ ಚಾಲಕರಿಗೆ ಕಿರುಕುಳ ನೀಡುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಸಯ್ಯದ್ ಮಹಮ್ಮದ್ ಮತ್ತು ವಾಹನ ಕಾರ್ ಚಾಲಕ ಕೃಷ್ಣಮೂರ್ತಿ ಪಿ. ಎಂಬುವವರ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಪಾಸಣೆಯ ಸಂದರ್ಭದಲ್ಲಿ ಬಂಗಾರದ ಆಭರಣಗಳು ಮತ್ತು ನಗದು ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಕೆಲ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ನೀಡಿದರೂ ವಾಹನಗಳನ್ನು ಹಿಡಿದು ನಿಲ್ಲಿಸಿಕೊಂಡು ಸತಾಯಿಸುತ್ತಿದ್ದರು, ಇದರಿಂದ ನಿಗದಿತ ಸಮಯದಲ್ಲಿ ಸರಕು ಸಾಮಗ್ರಿಗಳನ್ನು ಪೂರೈಸಲು ತೊಂದರೆಯಾಗುತ್ತಿದೆ. ಹೀಗೆ ವಾಹನಗಳನ್ನು ದಿನಗಟ್ಟಲೆ ಹಿಡಿದು ನಿಲ್ಲಿಸಿಕೊಂಡು ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಎಸಿಬಿ ಅಧಿಕಾರಿಗಳಿಗೆ ಬಂದಿತ್ತು.

ಅಲ್ಲದೇ ವಾಣಿಜ್ಯ ತೆರಿಗೆ ಅಧಿಕಾರಿಗಳು ಗೂಗಲ್ ಪೇ , ಫೋನ್ ಪೇ ಮೂಲಕ ಲಂಚದ ಹಣ ಸ್ವೀಕರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ದೂರಿನ ಆಧಾರದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ತನಿಖೆಯ ವೇಳೆ ಸಿಟಿಒ ಸಯ್ಯದ್ ಮಹಮ್ಮದ್ ಅವರ ಮನೆಯಲ್ಲಿ ೩ ಲಕ್ಷ ರೂ.ಗೂ ಹೆಚ್ಚಿನ ನಗದು ಮತ್ತು ೩೮೦ ಗ್ರಾಂಗೂ ಹೆಚ್ಚಿನ ಚಿನ್ನಾಭರಣಗಳು ಪತ್ತೆಯಾಗಿವೆ. ಇನ್ನು ಚಾಲಕ ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ಯಶವಂತ್ ಅವರ ಮನೆಯಲ್ಲೂ ನಗದು ಮತ್ತು ಬಂಗಾರದ ಆಭರಣಗಳು ಪತ್ತೆಯಾಗಿದ್ದು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಶುಕ್ರವಾರ ‘ಕೈಗಾರಿಕಾ ಅದಾಲತ್‌’ ; ಉದ್ಯಮಿಯಾಗು – ಉದ್ಯೋಗ ನೀಡು ಕಾರ್ಯಗಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button