ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಶಾಖೆಗಳನ್ನು ತೆರೆಯುವ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ವ್ಯಾಪಿಸಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಟಿ ಲಿ., ಸಂಸ್ಥೆ (ಮಲ್ಟಿಸ್ಟೇಟ್)ಯು 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ 30 ಕೋಟಿ 8 ಲಕ್ಷ ರೂಗಳಷ್ಟು ಲಾಭ ಗಳಿಸಿದೆ ಎಂದು ಸಂಸ್ಥೆಯ ಚೇರಮನ್ ಜಯಾನಂದ ಜಾಧವ ಹೇಳಿದರು.
ಅವರು ಶುಕ್ರವಾರ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸಭಾಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಆರ್ಥಿಕ ವಲಯದಲ್ಲಿ ಬದಲಾವಣೆಗಳನ್ನು ತಂದಿದ್ದರು ಸಹ ಅರ್ಥಿಕವಾಗಿ ಬೀರೇಶ್ವರ ವರ್ಷದಿಂದ ವರ್ಷಕ್ಕೆ ಸದೃಡವಾಗಿ ಬೆಳೆಯುತ್ತಿದೆ. ಕಳೆದ ವರ್ಷಕ್ಕಿಂತ ಸುಮಾರು 4 ಕೋಟಿ 69 ಲಕ್ಷ ರೂಗಳಿಗೂ ಮೀರಿ ಅಂದರೆ ಶೇ 18.50 ರಷ್ಟು ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದರು.
ಸಹಕಾರಿಯು 3,31,000 ಸದಸ್ಯರನ್ನು ಒಳಗೊಂಡು ಶೇರು ಬಂಡವಾಳ 29,29,51,500, ಠೇವು ಸಂಗ್ರಹ 3045 ಕೋಟಿ 62 ಲಕ್ಷ, ಸಾಲ & ಮುಂಗಡ 2345 ಕೋಟಿ 69 ಲಕ್ಷ ದುಡಿಯುವ ಬಂಡವಾಳ 3370 ಕೋಟಿ 63 ಲಕ್ಷ ರೂಗಳ ಹೊಂದಿ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿಯಾಗಿ ಹೊರಹೊಮ್ಮಿದೆ ಎಂದರು.
ಬಸವಜ್ಯೋತಿ ಯುಥ್ ಪೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ,ಕಳೆದ 30 ವರ್ಷಗಳ ಹಿಂದೆ ಸ್ಥಾಪನೆಯಾದ ಬೀರೇಶ್ವರ ಸಹಕಾರಿಯು 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಪ್ರಗತಿಪಥದಲ್ಲಿ ಮುನ್ನಡೆದಿದ್ದು ಧನಾತ್ಮಕ ಚಿಂತನೆಯೊಂದಿಗೆ 3000 ಕೋಟಿ ರೂಗಳ ಠೇವು ಸಂಗ್ರಹಿಸುವ ಮೂಲಕ ಒಂದು ಮೈಲುಗಲ್ಲು ಸಾಧಿಸಿದೆ ಎಂದು ತಿಳಿಸಿದರು.
ಕರೋನಾ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಲವು ಸಂಸ್ಥೆಗಳ ಸಿಬ್ಬಂದಿಗಳು ಕೆಲಸ ಕಳೆದುಕೊಂಡರು ಆದರೆ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಅವರು ಒಂದು ದಿಟ್ಟವಾದ ನಿರ್ಧಾರ ತೆಗೆದುಕೊಂಡು ಸಿಬ್ಬಂದಿಗಳಿಗೆ ಪ್ರತಿಶತ 44 ರಷ್ಟು ವೇತನ ಹೆಚ್ಚಳ ಮಾಡುವ ಮೂಲಕ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 3 ಕೋಟಿ ರೂಗಳ ವೇತನ ನೀಡುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಎಂದರು.
ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಟಿ ಲಿ., ಸಂಸ್ಥೆ (ಮಲ್ಟಿಸ್ಟೇಟ್)ಯು ಅಂತರಾಜ್ಯ ಕಾಯ್ದೆಯಡಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ 154 ಶಾಖೆಗಳು ಸೇವೆಯನ್ನು ನೀಡುತ್ತಿದ್ದು ಬರುವ ದಿನಗಳಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅಲ್ಲಿನ ಸಹಕಾರ ಸಚಿವರೊಂದಿಗೆ ಅನುಮತಿಗಾಗಿ ಕೋರಿದ್ದು ಶೀಘೃದಲ್ಲಿಯೇ ಅನುಮತಿ ಸಿಗಲಿದೆ ಎಂಬ ವಿಶ್ವಾಸದೊಂದಿಗೆ ಕರ್ನಾಟಕದಲ್ಲಿ 79,ಗೋವಾ ರಾಜ್ಯದಲ್ಲಿ 11 ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ 20 ಹೀಗೆ 110 ಹೊಸ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದರು.
ಬೀರೇಶ್ವರ ಪ್ರೋಟಾಲ್ ಪ್ರಜೋಕ್ಟ್ ಬೇಸ 5 ಬ್ರ್ಯಾಂಡ್ಗಳ ಮಿನಿ ಎಟಿಎಂ ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
ಬಿರೇಶ್ವರ ತನ್ನ ಆಡಳಿತ ಮಂಡಳಿ ಸದಸ್ಯರು,ಸಿಬ್ಬಂದಿಗಳು ಹಾಗೂ ಸಂಸ್ಥೆಯ ಗ್ರಾಹಕರ, ಅಮೂಲ್ಯ ಯೋಜನೆಯ ಫಲಾನುಭವಿಗಳ ಜೀವನ ಸುರಕ್ಷತೆಯ ದೃಷ್ಠಿಯಿಂದ ಕಳೆದ 2021-22ನೇ ಸಾಲಿನಲ್ಲಿ 2 ಕೋಟಿ 90ಲಕ್ಷ ರೂಗಳಿಗೂ ವಿವಿಧ ವಿಮೆ ಯೋಜನೆಯಡಿ ಸೌಲಭ್ಯ ನೀಡಲಾಗಿದೆ. ಇಲ್ಲಿಯವರೆಗಗೆ 11 ಕೋಟಿ 95 ಲಕ್ಷ ರೂಗಳ ವಿಮೆ ಹಣ ನಿಡಿದ್ದೆವೆ ಎಂದು ತಿಳಿಸಿದರು.
ಬೀರೇಶ್ವರ ಉಪಾಧ್ಯಕ್ಷ ಸಿದ್ರಾಮ ಗಡದೆ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಶಂಕರ ಶಾಹಿರ್,ಯಾಶೀನ್ ತಾಂಬೂಳೆ, ಸುನೀಲ ದೇಶಪಾಂಡೆ, ಬಸಪ್ಪ ಗುರವ, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಭಾರ, ಬಿ.ಎ.ಗುರವ,ಎಸ್.ಕೆ.ಮಾನೆ,ಶಿವು ಡಬ್ಬ, ಕಲ್ಲಪ್ಪ ಹುನ್ನರಗಿ ,ಶೇಖರ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಧಾನ ವ್ಯವಸ್ಥಾಪಕ ರವೀಂದ್ರ ಚೌಗಲಾ ಸ್ವಾಗತಿಸಿದರು.
ಶಾಲೆ ಹಾಗೂ ಶಿಕ್ಷಕರ ಅಸಮಾನ ಹಂಚಿಕೆ ಸರಿಪಡಿಸಲು ಪ್ರಯತ್ನ – ಅರುಣ ಶಹಾಪುರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ