ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿನ್ನೆಯಷ್ಟೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತಷ್ಟು ಏರಿಕೆಯಾಗಿದ್ದು, 10ಗ್ರಾಂ ಚಿನದ ದರಕ್ಕೆ 260ರೂಪಾಯಿಯಂತೆ ಏರಿಕೆಯಾಗಿದೆ. ಆದರೆ ಬೆಳ್ಳಿದರ ಕುಸಿತಗೊಂಡಿದೆ.
ಭಾರತದಲ್ಲಿ ಇಂದು 22ಕ್ಯಾರಟ್ 10 ಗ್ರಾಂ ಚಿನ್ನ 48,250 ರೂ ಆಗಿದೆ. 24 ಕ್ಯಾರಟ್ ಚಿನ್ನದ ದರ 52,630ರೂ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ 48,250 ರೂ ಇದೆ. 24 ಕ್ಯಾರೆಟ್ ಚಿನ್ನ 53,260 ರೂಪಾಯಿ ಆಗಿದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,820 ರೂ. ಮುಂಬೈ- 48,250 ರೂ, ದೆಹಲಿ- 48,250 ರೂ, ಕೊಲ್ಕತ್ತಾ- 48,250 ರೂ, ಹೈದರಾಬಾದ್- 48,250 ರೂ, ಪುಣೆ- 48,350 ರೂ ಆಗಿದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 53,260 ರೂ, ಮುಂಬೈ- 52,630 ರೂ, ದೆಹಲಿ- 52,630 ರೂ, ಕೊಲ್ಕತ್ತಾ- 52,630 ರೂ, ಹೈದರಾಬಾದ್- 52,630 ರೂ, ಪುಣೆ- 52,730 ರೂ, ಮೈಸೂರು- 52,630 ರೂ. ಆಗಿದೆ.
ಇಂದು ಬೆಳ್ಳಿ ದರದಲ್ಲಿ ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 71,300 ರೂ ಇದೆ. ಮುಂಬೈ, ಚೆನ್ನೈನಲ್ಲಿಯೂ ಇದೇ ದರ ನಿಗದಿಯಾಗಿದ್ದು, ದೆಹಲಿಯಲ್ಲಿ 66,800 ರೂ ಇದೆ.
ಚಿಕ್ಕೋಡಿ ಬಳಿ ಪಾಕಿಸ್ತಾನಿ ಕರೆನ್ಸಿ ಪತ್ತೆ: ಪೊಲೀಸರಿಂದ ತನಿಖೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ