Latest

ಮುಸ್ಲಿಂ ಭಕ್ತರ ಮನೆಯಲ್ಲಿ ಹುಕ್ಕೇರಿ ಶ್ರೀಗಳ ಪಾದಪೂಜೆ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ
ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ರಂಜಾನ್, ಬಾಗವಾನ್ ಎಂಬ ಮುಸ್ಲಿಂ ಭಕ್ತರು ತಮ್ಮ ಮನೆಯ ವಾಸ್ತು ಶಾಂತಿಯ ಪ್ರಯುಕ್ತ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರನ್ನು ಬರಮಾಡಿಕೊಂಡು ಇಡೀ ಕುಟುಂಬ ಶ್ರೀಗಳನ್ನು ಗೌರವಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿಗಳು, ಹುಕ್ಕೇರಿಯ ಹಿರೇಮಠ ಸರ್ವ ಜನಾಂಗದವರು ಕೂಡ ಅತಿ ಪ್ರೀತಿಯಿಂದ ನಡೆದುಕೊಳ್ಳುವ ಮಠ. ಹುಕ್ಕೇರಿಯ ಹಿರೇಮಠದಲ್ಲಿ ಈಗಲೂ ಕೂಡ ದಸರಾ ಉತ್ಸವದಲ್ಲಿ ಬನ್ನಿಯನ್ನು ತಂದು ಇಡುವವರು ಮುಸ್ಲಿಂ ಸಮುದಾಯದವರು. ಮುಸ್ಲಿಂ ಸಮುದಾಯದವರ ಮನೆಯ ಮುಂದೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುತ್ತದೆ. ಹುಕ್ಕೇರಿ ಹಿರೇಮಠ ಯಾವತ್ತು ಕೂಡ ಎಲ್ಲರನ್ನೂ ಸೌಹಾರ್ದಯುತವಾಗಿ ಪ್ರೀತಿಸುವಂತಹ ಮಠ ಎಂದರು.
ತನ್ನ ಧರ್ಮ ಶ್ರೇಷ್ಠ ಎನ್ನುವುದು ತಪ್ಪಲ್ಲ ಇನ್ನೊಂದು ಧರ್ಮ ಕನಿಷ್ಠ ಎನ್ನುವುದು ದೊಡ್ಡ ತಪ್ಪು. ಅದಕ್ಕಾಗಿ ತನ್ನ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮವನ್ನು ಕೂಡ ಗೌರವಿಸುವವನೇ ನಿಜವಾದ ಮನುಷ್ಯನಾಗುತ್ತಾನೆ. ನಮ್ಮ ಶಿಷ್ಯ ಬಳಗ ವಿಶೇಷವಾಗಿ ಶ್ರೀಮಠವನ್ನು ಅತಿ ಸೌಹಾರ್ದ ಮನೋಭಾವದಿಂದ ನೋಡುತ್ತಾ ಬಂದಿರುವುದು ಅಭಿಮಾನದ ಸಂಗತಿ ಎಂದರು.

ಈ ಸಂದರ್ಭದಲ್ಲಿ ರಂಜಾನ್ ಬಾಗವಾನ್ ಮಾತನಾಡಿ, ಶ್ರೀಗಳು ನಮ್ಮ ಮನೆಯ ಪಾಯಾ ಪೂಜೆಗೂ ಬಂದು ಇವತ್ತು ಅವರ ಆಶೀರ್ವಾದದಿಂದ ಶೀಘ್ರವಾಗಿ ಎರಡು ಮನೆಗಳನ್ನು ನಾನು ಕಟ್ಟಿದ್ದೇನೆ. ಅದಕ್ಕೆಲ್ಲ ಮಹಾಸ್ವಾಮಿಗಳವರ ಆಶೀರ್ವಾದ ಕಾರಣ ಎಂದರು.

Home add -Advt

Related Articles

Back to top button