ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಸಂತೋಷ್ ಯಾರು ಎಂದೇ ನನಗೆ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಂತೋಷ ಯಾರು ಎಂದೇ ನನಗೆ ಗೊತ್ತಿಲ್ಲ. ಅವರನ್ನು ನಾನು ನೋಡಿಯೇ ಇಲ್ಲ ಎಂದು ಅವರು ಹೇಳಿದರು.
ಸಂತೋಷ ಪಾಟೀಲ ಬರೆದಿದ್ದು ಡೆತ್ ನೋಟ್ ಅಲ್ಲ, ಅದು ವಾಟ್ಸಪ್ ಮೆಸೇಜ್. ಅವರೇ ಬರೆದಿದ್ದೋ ಬೇರೆಯವರು ಟೈಪ್ ಮಾಡಿದ್ದೋ ಗೊತ್ತಿಲ್ಲ. ನನ್ನ ವಿರುದ್ಧ ಯಾರೋ ಷಢ್ಯಂತ್ರ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ನ್ಯಾಯಾಲಯದಲ್ಲಿ ಫೈಟ್ ಮಾಡಬೇಕಿತ್ತು. ಆತ ಏಕೆ ಸತ್ತುಹೋದನೋ ಗೊತ್ತಿಲ್ಲ. ಕೋರ್ಟ್ ನಲ್ಲಿ ಕೇಸ್ ಇತ್ತು, ಎದುರಿಸಬೇಕಿತ್ತು. ನಿಯಮ ಉಲ್ಲಂಘಿಸಿ ಟೆಂಡರ್ ಕೊಟ್ಟಿಲ್ಲ. ಕೊಡುವುದಕ್ಕೆ ಬರುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಇಂತಹ ಸಾಕಷ್ಟು ಪ್ರಕರಣ ನೋಡಿದ್ದೇನೆ. ಇದಕ್ಕೆಲ್ಲ ಜಗ್ಗುವುದಿಲ್ಲ. ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲ ವಿವರ ಕೊಡುತ್ತೇನೆ ಎಂದು ಹೇಳಿದರು.
ಪ್ರಭಾವಿಗಳಿಬ್ಬರು ಸಂತೋಷ್ ಪಾಟೀಲ್ ಗೆ ಬೆದರಿಕೆ ಹಾಕಿದ್ದರು – ಲಕ್ಷ್ಮಿ ಹೆಬ್ಬಾಳಕರ್ ಸ್ಫೋಟಕ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ