Latest

ಶನಿವಾರ-ಭಾನುವಾರ ಪ್ರಬುದ್ಧಭಾರತದಿಂದ ‘ಸ್ಟೆಪ್-2018’ ಸಮಾವೇಶ

ಹಲವು ಗಣ್ಯರ ಆಗಮನ; ವಿಟಿಯು ಆವರಣ ಸಜ್ಜು

 
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಭುದ್ಧ ಭಾರತ ಸಂಘಟನೆ ಅಡಿಯಲ್ಲಿ 2 ದಿನಗಳ ಸಮಾವೇಶ ‘ಸ್ಟೆಪ್ -2018’ ಶನಿವಾರ ಮತ್ತು ಭಾನುವಾರ ಬೆಳಗಾವಿಯಲ್ಲಿ ನಡೆಯಲಿದ್ದು, ಆತಿಥ್ಯ ವಹಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸನ್ನದ್ಧಗೊಂಡಿದೆ.
 ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರಯ ಹೊಸಬಾಳೆ ಶನಿವಾರ ಬೆಳಗ್ಗೆ 10 ಗಂಟೆಗೆ ದಿಕ್ಸೂಚಿ ಭಾಷಣದ ಮೂಲಕ ಸಮಾವೇಶ ಉದ್ಘಾಟಿಸುವರು. 
  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕೆಎಲ್ಇ ವಿವಿ, ವಿಟಿಯು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಯೋಗ ಒದಗಿಸಿವೆ. 
 ಮಾನವ ಹಕ್ಕುಗಳ ಸಂಘಟನೆಯ ಸಂಸ್ಥಾಪಕಿ ಡಾ.ಮಧುಕಿಶ್ವರ, ನಾಗರಿಕ ಹಕ್ಕುಗಳ ಕಾರ್ಯಕರ್ತ ಶೆಹಜಾದ ಪೂನಾವಾಲಾ, ಇಸ್ರೋ ಮಾಜಿ ಮುಖ್ಯಸ್ಥ ಕಿರಣ ಕುಮಾರ, ಲೇಖಕ ಪ್ರೊ.ಪಿ.ಕನಗಸಭಾಪತಿ, ಮಣಿಪುರದ ರಾಜಕೀಯ ವಿಚಾರವಾದಿ ರಜತ್ ಸೇಥಿ, ಪುನರುತ್ಥಾನ ವಿದ್ಯಾಪೀಠದ ಸಂಸ್ಥಾಪಕಿ ಇಂದುಮತಿ ಕಾದಾರೆ, ಭಾರತೀಯ ಶಿಕ್ಷಣ ಮಂಡಳದ ಕಾರ್ಯದರ್ಶಿ ಮುಖುಲ್ ಕಾನಿಟ್ಕರ್, ಡಾ.ಶಾಮಪ್ರಸಾದ ಮಖರ್ಜಿ ಫೌಂಡೇಶನ್ ನಿರ್ದೇಶಕ ಡಾ.ಅನಿರ್ಬಾನ್ ಗಂಗೂಲಿ, ಲೇಖಕ ಕಿರಣಕುಮಾರ, ಹಿರಿಯ ಪತ್ರಕರ್ತ ಕೆ.ಎಸ್. ಪ್ರಫುಲ್ ಕೇತ್ಕರ್, ಲೇಖಕಿ ಶುಭರಸ್ತಾ ಮೊದಲಾದವರು 2 ದಿನದ ಸಮಾವೇಶದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು. 
ಭಾನುವಾರ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಮುಕ್ತ ಸಂವಾದದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ ಸಿನ್ಹಾ ಮತ್ತು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಪಾಲ್ಗೊಳ್ಳುವರು. 3.45ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ ಭಾಗವಹಿಸಲಿದ್ದಾರೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 800ಕ್ಕೂಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
 ಹೆಚ್ಚಿನ ಮಾಹಿತಿಗೆ 9480188877 ಅಥವಾ 9886635260 ಸಂಪರ್ಕಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button