Kannada NewsKarnataka News

ಸರ್ವಾಂಗೀಣ ಅಭಿವೃದ್ಧಿ ಕಾಣುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ ಬೆಳಗಾವಿ –  ​ಬೆಳಗಾವಿ ಗ್ರಾಮೀಣ ಕ್ಷೇತ್ರ ಅತ್ಯಂತ ಸುಂದರ ಕ್ಷೇತ್ರವಾಗಿದ್ದು, ಹಿಂದಿನಿಂದ ​ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದಿರುವುದರಿಂದ ಹಿಂದುಳಿದ ಕ್ಷೇತ್ರ ಎನ್ನುವ ಹಣಪಟ್ಟಿ ಹೊತ್ತುಕೊಳ್ಳುವಂತಾಗಿದೆ. ಕಳೆದ 4 ವರ್ಷದಿಂದ ಆಗುತ್ತಿರುವ ಅಭಿವೃದ್ಧಿಯನ್ನು ಇದೇ ರೀತಿಯಲ್ಲಿ ಮುಂದುವರಿಸಿ ಇನ್ನು 4 -5 ವರ್ಷದಲ್ಲಿ ಕ್ಷೇತ್ರ ರಾಜ್ಯದ ಗಮನ ಸೆಳೆಯುವಂತೆ ಮಾಡುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ​ಭ​ರವಸೆ ನೀಡಿದರು.  

 
ನಂದಿಹಳ್ಳಿ ಗ್ರಾಮದ ಶ್ರೀ ವಿಠ್ಠಲ ಬೀರದೇವರ ಮಂದಿರದ ಮೂರ್ತಿ ಪ್ರತಿಷ್ಠಾಪನೆ, ನೂತನ ಕಟ್ಟಡ ಹಾಗೂ ಜಾತ್ರಾ ಮಹೋತ್ಸವದ ಕಾರ್ಯಕ್ರಮವನ್ನು​ ​ಉದ್ಘಾಟಿಸಿ​ ಅವರು ಮಾತನಾಡಿದರು. ಕ್ಷೇತ್ರ ಅತ್ಯಂತ ವೈವಿದ್ಯಮಯವಾಗಿದೆ, ಸರ್ವಜನಾಂಗದ ತೋಟದಂತಿದೆ. ಜನರು ಆದ್ಯಾತ್ಮಿಕ ಮನೋಭಾವದವರಾಗಿದ್ದು, ಮುಗ್ದರಾಗಿದ್ದಾರೆ. ಪ್ರತಿ ಊರಲ್ಲಿ ಒಂದಕ್ಕಿಂತ ಒಂದು ಸುಂದರ ಮಂದಿರಗಳಿವೆ. ಸರ್ವಾಂಗೀಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ​ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ ಅಧ್ಯಕ್ಷೆ  ನಿಂಗವ್ವ ನಾ ಕುರುಬರ, ಯುವರಾಜ ಕದಂ, ಸಂಜೀವ ಮಾದರ, ಸುಧೀರ ಗಡ್ಡೆ, ಮಹಾದೇವ ಜಾಧವ್, ಚೇತನ ಪಾಟೀಲ, ಮಾರುತಿ ಲೋಕೂರ, ಮಲ್ಲಿಕಾರ್ಜುನ ಲೋಕೂರ, ಮಾರುತಿ ಕಾಮನ್ನಾಚೆ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button