Latest

ಪಿಎಸ್ ಐ ಅಕ್ರಮ; ಮತ್ತೋರ್ವ ಕಾನ್ಸ್ ಟೇಬಲ್ ಅಮಾನತು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

545 ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ಬೆಂಗಳೂರಿನ ವಿವೇಕನಗರ ಠಾಣೆ ಕಾನ್ಸ್ ಟೇಬಲ್ ಕರಿಬಸವನಗೌಡ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಆಯ್ಕೆ ಆದೇಶ ಪ್ರತಿ ಕೈಗೆ ಸಿಗುವ ಮೊದಲೇ ಪಿಎಸ್ ಐ ಯೂನಿಫಾರ್ಮ್ ಧರಿಸಿ ಸ್ವಗ್ರಾಮದಲ್ಲಿ ಪ್ರಚಾರ ಗಿಟ್ಟಿಸಿದ್ದ. ಅಲ್ಲದೇ ಕಾನ್ಸ್ ಟೇಬಲ್ ಹುದ್ದೆಗೆ ರಾಜೀನಾಮೆ ಕೂಡ ನಿಡದೇ ಪಿಎಸ್ ಐ ಬಟ್ಟೆ ಧರಿಸಿ ಪ್ರಚಾರ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸ್ ನಿಯಮಾವಳಿ ಉಲ್ಲಂಘನೆ ಆರೋಪದಲ್ಲಿ ಕಾನ್ಸ್ ಟೇಬಲ್ ಕರಿಬಸವನಗೌಡ ಅವರನ್ನು ಡಿಸಿಪಿ ಅನುಚೇತ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಿಎಸ್ ಐ ಹಗರಣ ಸಿಬಿಐಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆಗ್ರಹ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button