Kannada NewsLatest

ಬಿಜೆಪಿ ಸುಳ್ಳು ಪ್ರಚಾರಕ್ಕೆ ಮರುಳಾಗಬೇಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ಮತಕ್ಷೇತ್ರದ ಎಲ್ಲಾ ಗ್ರಾಮಗಳ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

ಯಮಕನಮರಡಿ ಮತಕ್ಷೇತ್ರದ ಹಗೇದಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್‌ ಬೆಳಗಾವಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಯಡಿ ಶಾಸಕರ ಅನುದಾನದಲ್ಲಿ ಮಂಜೂರಾದ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣದಿಂದ ಕಲ್ಯಾಣ ಕಾರ್ಯಗಳು, ಸಮುದಾಯದ ಸಭೆ-ಸಮಾರಂಭಗಳನ್ನು ಮಾಡಲು ಅನುಕೂಲವಾಗಿದ್ದು, ಈ ಭವನವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಅಂದಾಗ ಮಾತ್ರ ಭವನ ನಿರ್ಮಾಣ ಮಾಡಿದ್ದಕ್ಕೆ ಸ್ವಾರ್ಥಕವಾಗುತ್ತದೆ ಎಂದರು.

ವಿಧಾನಸಭೆ ಚುನಾವಣೆಗೆ ಇನ್ನು ಒಂದೇ ವರ್ಷ ಬಾಕಿ ಉಳಿದಿದ್ದು, ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಮರುಳಾಗದೇ ಕಾಂಗ್ರೆಸ್‌ ಮುಖಂಡರು ಜಾಗೃತರಾಗಬೇಕೆಂದು ತಿಳಿಸಿದ ಅವರು, ಮುಖಂಡರು ಮತಕ್ಷೇತ್ರದ ಜನರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ. ಹೀಗಾಗಿ ಅಭಿವೃದ್ಧಿ ಪರ ನಿಲುವು ತಾಳಬೇಕು. ನಿಮಗೆ ಬೇಕಾದ ಸಹಾಯ, ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಗದಾಳ ಗ್ರಾಮದಿಂದ ಶ್ಯಾಬಂದ್ರಿ ಕ್ರಾಸ್ ವರಗೆ 7 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಇದೇ ವೇಳೆ ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಸ್ತೆ ಸಂಪರ್ಕ ಕಲ್ಪಿಸಿದ್ದಕ್ಕಾಗಿ ಶಾಸಕ ಸತೀಶ್‌ ಜಾರಕಿಹೊಳಿ ಅವರನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬಂದಿ, ಬಸಾಪುರ ಗ್ರಾಮಸ್ಥರು ಸತ್ಕರಿಸಿದರು.

ಈ ಸಂದರ್ಭದಲ್ಲಿ ನಿಂಗಪ್ಪಾ ಬಾ. ಬಂಜಿರಾಮ, ಅಣ್ಣಾ ಕುಮದಿ, ಬಂಜಿರಾಮ ಸರ್, ಫಕೀರಪ್ಪ ಹೊಸಗೌಡ,
ಪ್ರಕಾಶ ಮ. ಗೊರಗುದ್ದಿ, ಬಾಳಪ್ಪಾ ಗೊರಗುದ್ದಿ, ಅಪ್ಪಯ್ಯ ಹಳೆನಾಯಿಕ, ಗ್ರಾ.ಪ. ಅಧ್ಯಕ್ಷರಾದ ನೀಲವ್ವಾ ಕರೋಳಿ, ಗ್ರಾ.ಪ.ಉಪಾಧ್ಯಕ್ಷರಾದ ಲಗಮಣ್ಣಾ ಅ. ಗೊರವ, ಈರಪ್ಪಾ ಬಂಜಿರಾಮ, ಕೆಇಪಿ ನಿರ್ದೇಶಕ
ಮಂಜುನಾಥ ಪಾಟೀಲ, ನಜೀರ್ ಮೊಮಿನ, ಗುತ್ತಿಗೆದಾರ ಜಂಗ್ಲಿ, ಬಸವರಾಜ ದುಮ್ಮನಾಯಿಕ ಸೇರಿದಂತೆ ಇತರರು ಇದ್ದರು.

ಗರ್ಭಿಣಿ ಮೇಲೆ ಗ್ಯಾಂಗ್ ರೇಪ್; ಉದ್ದೇಶಪೂರ್ವಕವಲ್ಲ ಅನಿರೀಕ್ಷಿತ ಅತ್ಯಾಚಾರ ಎಂದ ಗೃಹ ಸಚಿವೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button