Latest

ಪಿಎಸ್ ಐ ಮರು ಪರೀಕ್ಷೆ ಯಾವಾಗ ? ಏನಂದ್ರು ಗೃಹ ಸಚಿವರು?

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಸರ್ಕಾರ ಘೋಷಿಸಿದ್ದು, ತನಿಖೆ ಮುಗಿಯುತ್ತಿದ್ದಂತೆ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರಕರಣದ ತನಿಖೆ ಮುಗಿದ ಬಳಿಕ ಮರು ಪರೀಕ್ಷೆ ದಿನಾಂಕ ತಿಳಿಸುತ್ತೇವೆ. ಕಲಬುರ್ಗಿ ಒಂದೇ ಸೆಂಟರ್ ನಲ್ಲಿ ಅಲ್ಲ ರಾಜ್ಯದ ಬೇರೆ ಬೇರೆ ಸೆಂಟರ್ ಗಳಲ್ಲಿಯೂ ಅಕ್ರಮ ನಡೆದಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದೇ ವೇಳೆ ಕಿಂಗ್ ಪಿನ್ ಹೆಸರು ಹೇಳಿದರೆ ಸರ್ಕಾರ ಉರುಳುತ್ತೆ ಅದಕ್ಕಾಗಿ ಹೆಸರು ಹೇಳಲು ಮುಂದಾಗುತ್ತಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಬರಿ ಹಿಟ್ ಆಂಡ್ ರನ್ ಮಾಡುವುದು ಬೇಡ. ಕಿಂಗ್ ಪಿನ್ ಹೆಸರು ಅವರಿಗೆ ಗೊತ್ತಿದ್ದರೆ ಹೇಳಲಿ. ಸರ್ಕಾರ ಬಿದ್ದರೂ ಪರವಾಗಿಲ್ಲ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರೇ ಕಿಂಗ್ ಪಿನ್ ಗಳು ಹಾಗಾಗಿ ಅವರು ತನಿಖೆಗೆ ಹಾಜರಾಗುತ್ತಿಲ್ಲ. ಸಿಐಡಿ ಮೂರು ಬಾರಿ ನೋಟೀಸ್ ನೀಡಿದರೂ ಉತ್ತರ ನೀಡಲು ಬರುತ್ತಿಲ್ಲ ಎಂದು ಹೇಳಿದರು.
ಕಿಂಗ್ ಪಿನ್ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ; ಹೆಚ್ ಡಿಕೆ ಸ್ಫೋಟಕ ಹೇಳಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button