ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳ ಮತ್ತೊಂದು ಹೋರಾಟ ಆರಂಭವಾಗಿದ್ದು, ರಾಜ್ಯದಲ್ಲಿ ಮತ್ತೆ ಧಾರ್ಮಿಕ ಸಮರ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಮಸೀದಿಗಳಲ್ಲಿನ ಮೈಕ್ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳು ನೀಡಿದ್ದ ಗಡುವು ಅಂತ್ಯಗೊಂಡಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ಆರಂಭಿಸಲು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಮಸೀದಿ, ಮಂದಿರ, ಚರ್ಚ್ ಎಲ್ಲೆಡೆ ಲೌಡ್ ಸ್ಪೀಕರ್ ಹಾಕದಂತೆ ಹಾಗೂ ಧ್ವನಿವರ್ಧಕಗಳಿಗೆ ಕಡಿಮೆ ಪ್ರಮಾಣದ ಡೆಸಿಬಲ್ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಮಸೀದಿಗಳಲ್ಲಿ ರಾಜಾರೋಷವಾಗಿ ಆಜಾನ್ ಮೊಳಗಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ರಾಜ್ಯ ಸರ್ಕಾರಕ್ಕೆ ಮಸೀದಿಗಳಲ್ಲಿನ ಮೈಕ್ ತೆರವಿಗೆ ಗಡುವು ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ನಾಳೆ ಮುಂಜಾನೆ 5 ಗಂಟೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ, ಭಜನೆ, ಹನುಮಾನ್ ಚಾಲೀಸಾ ಆರಂಭವಾಗಲಿದೆ ಎಂದು ತಿಳಿಸಿದರು.
ಹಿಂದೂಪರ ಸಂಘಾನೆ ಕಾರ್ಯಕರ್ತರು ರಾಜ್ಯದ ಎಲ್ಲಾ ಜಿಲ್ಲೆ, ಗ್ರಾಮ, ನಗರಗಳಲ್ಲಿಯೂ ದೇವಾಲಯಗಳಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ನಮ್ಮನ್ನು ತಡೆಯಲು ಪೊಲಿಸರು ಮುಂದಾದರೆ ಸಂಘರ್ಷ ನಡೆಯುವುದು ನಿಶ್ಚಿತ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪಿಎಸ್ ಐ ಅಕ್ರಮ; ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಟಾಂಪ್ ವೆಂಡರ್ ಅರೆಸ್ಟ್; ಪ್ರಭಾವಿ ವ್ಯಕ್ತಿ ಪರಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ