ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಸೀದಿಗಳಲ್ಲಿನ ಮೈಕ್ ತೆರವಿಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ನಡೆಸಿದರು.
ರಾಜ್ಯದ ಹಲವು ದೇವಾಲಯಗಳಲ್ಲಿ ಇಂದು ಮುಂಜಾನೆಯಿಂದಲೇ ಆಜಾನ್ ವಿರುದ್ಧ ಮಂತ್ರಪಠಣಗಳು ಮೊಳಗಿದವು. ವಿಜಯಪುರದ ಜಮಖಂಡಿ ರಸ್ತೆಯಲ್ಲಿನ ಮರಡಿ ಬಸವೇಶ್ವರ ದೇವಾಲಯ, ಮೈಸೂರಿನ ಶಿವರಾಂಪೇಟೆಯಲ್ಲಿರುವ ಆಂಜನೇಯ ದೇವಾಲಯ, ಗದಗದಲ್ಲಿ ಸುಮಾರು 16 ದೇಸ್ಥಾನ, ಯಾದಗಿರಿ ನಗರದ ಬಸವೇಶ್ವರ ಮಂದಿರ, ಚಿಕ್ಕಮಗಳೂರಿನ ಕೊಂಗನಾಟಮ್ಮ ದೇವಸ್ಥಾನ, ಧಾರವಾಡದ ಕಾಕರ ಮಸೀದಿ ಬಳಿಯ ರಾಮ ಮಂದಿರ, ಬೆಳಗಾವಿಯ ದೇವಾಲಯಗಳಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸುಪ್ರಭಾತ, ಭಕ್ತಿ ಗೀತೆ ಹಾಗೂ ಮಂತ್ರಪಠಣಗಳಿಗೆ ಚಾಲನೆ ನೀಡಿದರು.
ಈ ವೇಳೆ ಮೈಸೂರಿನಲ್ಲಿ ಮಾತನಾಡಿರುವ ಪ್ರಮೋದ್ ಮುತಾಲಿಕ್ ಸುಪ್ರಭಾತದಿಂದ ಯಾರಿಗೂ ಕಿರಿಕಿರಿಯಾಗಲ್ಲ. ಕಿರಿಕಿರಿಯುಂಟಾಗುವುದು ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಹೀಗಾಗಿ ಅವರಿಗೆ ಧ್ವನಿವರ್ಧಕಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ. ಸುಪ್ರಭಾತ ಅಭಿಯಾನ ಯಶಸ್ವಿಯಾಗಿದೆ ಎಂದು ಹೇಳಿದರು.
ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್ ಗೆ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ; 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ