
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬ್ಯಾಂಕಾಕ್ ನಲ್ಲಿ ನಡೆದ ಥಾಮಸ್ ಮತ್ತು ಉಬರ್ ಕಪ್ ಬ್ಯಾದ್ಮಿಂತನ್ ಪಂದ್ಯದಲ್ಲಿ ಭಾರತ ಇಂಡೋನೇಷ್ಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದುಕೊಂಡಿದೆ
ಥಾಮಸ್ ಕಪ್ ಫೈನಲ್ ನಲ್ಲಿ ಭಾರತ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿದೆ. ಭಾರತೀಯ ಪುರುಷರು ಬ್ಯಾಡ್ಮಿಂಟನ್ ನಲ್ಲೇ ಐತಿಹಾಸಿಕ ಗೆಲುವು ಸಾಧಿಸಿ ಹೊಸ ಚರಿತ್ರೆ ನಿರ್ಮಿಸಿದ್ದಾರೆ.
ಚೀನಾ, ಇಂಡೋನೇಷ್ಯಾ, ಜಪಾನ್, ಡೆನ್ಮಾಕ್ ಬಳಿಕ ಥಾಮಸ್ ಕಪ್ ಗೆದ್ದ 6ನೇ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲ ಬಾರಿ ಥಾಮಸ್ ಕಪ್ ಗೆದ್ದ ಭಾರತದ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಭಾರತ ತಂದ ಥಾಮಸ್ ಕಪ್ ಗೆದ್ದಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ಇದು ದೇಶದ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಲಿದೆ ಎಂದು ಶುಭಕೋರಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಬ್ರೇಕ್; 70 ವರ್ಷ ಮೇಲ್ಪಟ್ಟವರಿಗೂ ಕೋಕ್; ಮಹತ್ವದ ನಿರ್ಧಾರಕ್ಕೆ ಮುಂದಾದ ಕಾಂಗ್ರೆಸ್