Kannada NewsKarnataka NewsLatest

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ 30 ಸಾವಿರ ರೂ.ದಂಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ–  ರಾಯಬಾಗ ಪ.ಪಂ. ಮುಖ್ಯಾಧಿಕಾರಿಗೆ ಮೂರು ಪ್ರತ್ಯೆಕ ಪ್ರಕರಣಗಳಲ್ಲಿ ತಲಾ ರೂ 10.000/ ದಂಡ ವಿಧಿಸಲಾಗಿದೆ.
 ರಾಯಬಾಗದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಜು ಮಾಂಗ ಇವರಿಗೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠ ದಂಡ ವಿಧಿಸಿ ಆದೇಶ ಹೊರಡಿಸಿದೆ.
ವಕೀಲ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪಟ್ಟಣ ಪಂಚಾಯತ ರಾಯಬಾಗದಲ್ಲಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ಮಾಹಿತಿ ಕೊಡದೇ ಇದ್ದರಿಂದ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡು ಪ್ರಕರಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳದ್ದು ತಪ್ಪು ಕಂಡು ಬಂದಿದ್ದರಿಂದ ಮೂರು ಪ್ರಕರಣಗಳಲ್ಲಿ ತಲಾ 10.000/- ದಂಡ ವಿದಿಸಿ ಆದೇಶ ಹೊರಡಿಸಿದೆ‌  ಹಾಗೂ  ದಂಡದ ಮೊತ್ತವನ್ನು ಅವರ ವೇತನದಲ್ಲಿ ಕಡಿತ ಮಾಡಿ ಸರಕಾರಕ್ಕೆ ಜಮಾ ಮಾಡಲು ಆದೇಶ ನಿಡಿದೆ.
 ಮೊದಲ ಸಲ ಆಯೋಗವು  ಒಬ್ಬ ಸಾರ್ವಜನಿಕ ಅಧಿಕಾರಿಗೆ ಒಂದೇ ಸಲ ಮೂರು ಪ್ರಕರಣಗಳಲ್ಲಿ ದಂಡ ವಿಧಿಸಿದೆ ಎಂದು ಉಗಾರೆ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button