Kannada NewsKarnataka News

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ಮಧು ಕಲ್ಲಂತ್ರಿ ಆರೆಸ್ಟ್

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಇಲ್ಲಿಯ ಗುರುಪ್ರಸಾದ ಕಾಲೋನಿಯಲ್ಲಿ ಮಾರ್ಚ್ 15ರಂದು ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬಮ್ಮಣ್ಣವರ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದ ಮಧು ಕಲ್ಲಂತ್ರಿ ಬಂಧಿಸಲಾಗಿದೆ.

ಗುರುಪ್ರಸಾದ ಕಾಲೋನಿಯ (ಭವಾನಿ ನಗರ) ಗಣಪತಿ ಮಂದಿರದ ಬಳಿ ಬಸ್ತವಾಡ ಮೂಲದ, ಹಾಲಿ ಭವಾನಿ ನಗರದ ನಿವಾಸಿಯಾಗಿದ್ದ ರಾಜು ಮಲ್ಲಪ್ಪ ದೊಡ್ಡಬಮ್ಮಣ್ಣವರ್ (46) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಲಾಗಿತ್ತು.

ವಿಚಾರಣೆ ವೇಳೆ, ರಾಜು ದೊಡ್ಡಬಮ್ಮಣ್ಣವರ್ ಅವರ 2ನೇ ಪತ್ನಿಯೇ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿತ್ತು. ಈ ಸಂಬಂಧ ಈಗಾಗಲೆ 2ನೇ ಪತ್ನಿ ಸೇರಿದಂತೆ 9 ಜನರನ್ನು ಬಂಧಿಸಲಾಗಿತ್ತು. ರಾಜು ಪತ್ನಿ ಕಿರಣಾ, ಧರಣೇಂದ್ರ ಘಂಟಿ, ಶಶಿಕಾಂತ್ ಪಾಟೀಲ್, ಸಂಜಯ ರಜಪೂತ, ವಿಜಯ ಜಾಗೃತ ಮೊದಲಾದವರನ್ನು ಈ ಮೊದಲು ಬಂಧಿಸಲಾಗಿದೆ.

ರಾಜು ದೊಡ್ಡಬಮ್ಮಣ್ಣವರ್ ಮೂರು ಮದುವೆಯಾಗಿದ್ದ. ಎರಡನೇ ಪತ್ನಿ ಹಾಗೂ ರಾಜು ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತು ಎನ್ನಲಾಗಿದೆ. ಎರಡನೇ ಪತ್ನಿ ಕಿರಣಾ, ಪತಿಯ ಪಾರ್ಟನರ್ ಗಳಿಗೆ ಪತಿ ಹತ್ಯೆಗೆ 10 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟಿದ್ದಾರೆ.

ಇದೀಗ ಮಧು ಕಲ್ಲಂತ್ರಿ ಬಂಧಿಸಲಾಗಿದೆ.  ಮಧು ಸಾಮಾಜಿಕ ಕಾರ್ಯಕರ್ತ ಎಂದು ತನ್ನನ್ನು ಗುರುತಿಸಿಕೊಂಡಿದ್ದರು. ಪೊಲೀಸರಿಗೂ ಹತ್ತಿರವಾಗಿ ಓಡಾಡಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಅನೇಕ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸಿ ಪೊಲೀಸರೊಂದಿಗೆ ರಾಜಿ ಮಾಡಿಸುವ ಕೆಲಸವನ್ನೂ ಇವರು ಮಾಡುತ್ತಿದ್ದರು ಎನ್ನಲಾಗಿದೆ.

ಈಗ ಕೊಲೆಗಾರರಿಗೆ ಕೃತ್ಯವೆಸಗಲು ಪ್ರೋತ್ಸಾಹ ನೀಡಿದ್ದಲ್ಲದೆ, ಸಾಕ್ಷಿ ನಾಶಕ್ಕೂ ಯತ್ನಿಸಿದ್ದರು ಎಂದು ಡಿಸಿಪಿ ರವೀಂದ್ರ ಗಡಾದಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಈ ಸುದ್ದಿಗಳನ್ನು ಓದಿ –

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಬಿಲ್ಡರ್ ಮರ್ಡರ್

ಬೆಳಗಾವಿ; ಉದ್ಯಮಿ ಪತಿ ಹತ್ಯೆಗೆ 2ನೇ ಪತ್ನಿಯಿಂದಲೇ ಸುಪಾರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button