Kannada NewsLatest

ಸದಲಗಾ ಪುರಸಭೆ ಬಿಜೆಪಿ ತೆಕ್ಕೆಗೆ: ಪುರಸಭೆ ಅಧ್ಯಕ್ಷರಾಗಿ ಅಭಿಜೀತ ಪಾಟೀಲ ಅವಿರೋಧ ಆಯ್ಕೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಸದಲಗಾ ಪುರಸಭೆಯ 4 ಜನರ ಸದಸ್ಯತ್ವ ರದ್ಧಾಗಿತ್ತು ಇದರಲ್ಲಿ ಪುರಸಭೆ ಅಧ್ಯಕ್ಷ ಸುರೇಶ ಉದಗಾವೆ ಇವರ ಸದಸ್ಯತ್ವ ಕೂಡ ರದ್ಧಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೇಯಿತು. ಚುನಾವಣೆಯಲ್ಲಿ ಪುರಸಭೆ ಸದಸ್ಯ ಅಭಿಜೀತ ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಚಿಕ್ಕೋಡಿ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ ಕಾರ್ಯನಿರ್ವಹಿಸಿದರು. 18 ತಿಂಗಳ ಹಿಂದೆ ನಡೇದ ಪುರಸಭೆ ಚುನಾವಣೆಯಲ್ಲಿ ಸುರೇಶ ಉದಗಾವೆ,ಮಹೇಬುಬ ಕಾಲೆ,ಸುಜಾತಾ ಕುಂಭಾರ ಹಾಗೂ ನೌಶಾದಬಿ ಮುಜಾವರ ಇವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಚುನಾಯುತರಾಗಿದ್ದರು.

ನವಂಬರ್ 2020 ರಲ್ಲಿ ಈ ನಾಲ್ಕು ಜನ ಸದಸ್ಯರು ಕಾಂಗ್ರೇಸಗೆ ಬೆಂಬಲ ನೀಡಿ ಅಧಿಕಾರದ ‘ಕೈ’ ಹಿಡಿದ್ದರು.ನಂತರ ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು 4 ಜನರ ಮೇಲ ಪಕ್ಷಾಂತರ ಕಾಯ್ದೆ ಅಡಿ ಕೋರ್ಟಿನಲ್ಲಿ ತಕ್ರಾರು ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ಮಾಡಿ ನ್ಯಾಯಾಲಯವು ಇವರ ಸದಸ್ಯತ್ವ ರದ್ಧುಗೊಳಿಸಿತ್ತು.ಅಧ್ಯಕ್ಷರ ಹಾಗೂ ಸದಸ್ಯರ ಸದಸ್ಯತ್ವ ರದ್ಧಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.ಮಂಗಳವಾರ ನಡೇದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೇಸ ಪಕ್ಷದಿಂದ ಪುರಸಭೆ ಸದಸ್ಯ ಸತೀಶ ಪಾಟೀಲ ಹಾಗೂ ರವಿ ಗೋಸಾವಿ ,ಬಿಜೆಪಿ ಪಕ್ಷದಿಂದ ಅಭಿಜೀತ ಪಾಟೀಲ ನಾಮಪತ್ರ ಸಲ್ಲಿಸಿದ್ದರು.ಕಾಂಗ್ರೇಸಿನ ಇಬ್ಬರು ಸದಸ್ಯರು ನಾಮಪತ್ರ ಹಿಂಪಡೆದರು.ಆಗ ಬಿಜೆಪಿಯ ಅಭಿಜೀತ ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಬಳಿಕ ಮಾತನಾಡಿದ ಮಾಜಿ ವಿ.ಪಂ.ಸದಸ್ಯ ಮಹಾಂತೇಶ ಕವಟಗಿಮಠ 20 ವರ್ಷ ನಂತರ ಇಂದು ಬಿಜೆಪಿ ಕಾಂಗ್ರೇಸಿನ ಪಕ್ಷಾಂತರ ನೀತಿ ಮೇಟ್ಟಿ ನಿಂತು ಗೇಲವು ಸಾಧಿಸಿದೆ.ಸರರ್ಕಾರದ ನಗರೋತ್ಥಾನ ಯೋಜನೆ ಅಡಿ 10 ಕೋಟಿ ಅನುದಾನ ನೀಡುವದರೊಂದಿಗೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಪಡಿಸಲಾಗುವದು.ಚಿಕ್ಕೋಡಿ ಹಾಗೂ ಸದಲಗಾದ ಎಲ್ಲ ಬಿಜೆಪಿ ಮುಖಂಡರ ಸಹಕಾರ್ಯದಿಂದ ಬಿಜೆಪಿ ಗೇಲುವು ಸಾಧಿಸಿದೆ.ಮುಂದಿನ ದಿನಗಳಲ್ಲಿ ಸದಲಗಾ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಸಿಲಾಗುವದು.ನಗರೋತ್ಥಾನ ಯೋಜನೆಯಲ್ಲಿ ಸ್ಥಳಿಯ ಶಾಸಕರ ತಾರತಮ್ಯವಾಗಿದೆ.ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ನೂತನವಾಗಿ ಆಯ್ಕೆಯಾದ ಪುರಸಭೆ ಅಧ್ಯಕ್ಷ ಅಭಿಜೀತ ಪಾಟೀಲ ಮಾತನಾಡಿ,ಇದು ಜನರ ವಿಜಯವಾಗಿದೆ.ಈ ಮೋದಲೆ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು.ಮಾತ್ರ ಕೇಲವರು ಪಕ್ಷಕ್ಕೆ ದ್ರೋಹ ಮಾಡಿದರು.ಇವತ್ತು ಬಿಜೆಪಿಯ ಐತಿಹಾಸಿಕ ಗೇಲವು ಸಾಧಿಸಿದೆ.ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೋಲ್ಲೆ,ಮಾಜಿ ವಿ.ಪ.ಸದಸ್ಯ ಮಹಾಂತೇಶ ಕವಟಗಿಮಠ,ಮುಖಂಡ ಪ್ರಕಾಶ ಪಾಟೀಲ ಇವರ ವಿಶೇಷ ಸಹಕಾರ್ಯ ಸಿಕ್ಕಿದೆ.ಮುಮದಿನ ದಿನಗಳಲ್ಲಿ ಬಿಜೆಪಿಯ ಮುಖಂಡರು ನೀಡಿದ ಜವಾಬ್ದಾರಿ ಅರಿತು ಎಲ್ಲ ಸದಸ್ಯರನ್ನು ನಂಬಿಕೆಗೆ ತಂದು ಅಭಿವೃದ್ಧಿ ಮಾಡಲಾಗುವದು ಎಂದರು.

ಈ ಸಂದರ್ಭದಲ್ಲಿ ಮಾಜಿ ವಿ.ಪಂ.ಸದಸ್ಯ ಮಹಾಂತೇಶ ಕವಟಗಿಮಠ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜೇಶ ನೇರ್ಲಿ, ಚಿಕ್ಕೋಡಿ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಚುನಾವಣಾ ಅಧಿಕಾರಿ   ಸಿ. ಎ.ಪಾಟೀಲ,   ಧೂಧಗಂಗಾ ಕೃಷ್ಣಾ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕರಾದ ಪ್ರಕಾಶ ಪಾಟೀಲ,  ಚೇತನ ಪಾಟೀಲ, ಚಿಕ್ಕೋಡಿ ಮಂಡಲ ಅಧ್ಯಕ್ಷರಾದ  ಸಂಜಯ ಪಾಟೀಲ, ಪ್ರಕಾಶ  ಪಾಟೀಲ, ಮಾಳು ಭೆಂಡವಾಡೆ, ಲಕ್ಷ್ಮೀಕಾಂತ ಹಲಪ್ಪನ್ನವರ, ಆನಂದ ಪಾಟೀಲ, ಲಕ್ಷ್ಮೀ ನಿಂದಗುAಡೆ, ಶುಭಾಂಗಿ ಹವಾಲ್ದಾರ್, ಪ್ರಶಾಂತ ಕರಂಗಳೆ, ಬಸವರಾಜ ಹನಬರ, ಹೆಮಂತ ಶಿಂಗೆ, ಮನುಜಾ ಪಾಟೀಲ, ಲಕ್ಷ್ಮೀಬಾಯಿ ಸಾಮಗರ, ರಾಜು ಅಮೃತಸನ್ನವರ,ಅನೀರುದ್ಧ ಪಾಟೀಲ,ಸುನೀಲ ನಂದೆ ಇದ್ದರು.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ಮಧು ಕಲ್ಲಂತ್ರಿ ಆರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button