
*ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಭಾರತದಲ್ಲಿ ಟೈರ್ ವಹಿವಾಟಿನ ಪ್ರಮುಖ ಕಂಪನಿಯಾಗಿರುವ ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾದ ಅತಿದೊಡ್ಡ ನಿರ್ಮಾಣ ಸಲಕರಣೆಗಳ ಮೇಳ ‘ಎಕ್ಸ್ಕಾನ್– 2021’ ನಲ್ಲಿ ಇಂದು ತನ್ನ ಆಫ್-ದಿ-ರೋಡ್ ಟೈರ್ ವಿಭಾಗದಲ್ಲಿ 4 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಭಾರತದಲ್ಲಿನ ರಸ್ತೆಗಳ ಪರಿಸ್ಥಿತಿಗಳಿಗೆ ಸೂಕ್ತವಾದ ಉನ್ನತ ತಂತ್ರಜ್ಞಾನದ ಉತ್ಪನ್ನಗಳನ್ನು ಜೆಕೆ ಟೈರ್ ಹಲವಾರು ವರ್ಷಗಳಿಂದ ಪರಿಚಯಿಸುತ್ತ ಬಂದಿದೆ. ಈಗ ಅಂತಹ ಪ್ರಯತ್ನವನ್ನು ಇನ್ನೂ ನಾಲ್ಕು ಉತ್ಪನ್ನಗಳಿಗೆ ವಿಸ್ತರಿಸಲಾಗಿದೆ. ಈಗ ಹೊಸ ಟೈರ್ ಉತ್ಪನ್ನಗಳಾದ – 45/65-45 58ಪಿಆರ್ ವಿಇಎಂ 63 ಎಲ್5 ಟಿಎಲ್, 14.00-24 ಜಿಟಿಎಲ್ ಚಾಂಪ್ 16 ಪಿಆರ್ ಜಿ3 ಟಿಟಿ, 12.00-24 ಹಾರ್ಡ್ ರಾಕ್ ಚಾಂಪಿಯನ್ 20ಪಿಆರ್ ಇ4 ಟಿಟಿ ಮತ್ತು 16.00-25 ವಿಇಎಂ 045 44ಪಿಆರ್ ಇ3 ಟಿಟಿ – ಇವುಗಳನ್ನು ಕಂಪನಿಯ ಟೈರ್ ಉತ್ಪನ್ನಗಳ ಶ್ರೇಣಿಗೆ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ಹೊಸ ಟೈರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಬಗ್ಗೆ ಮಾತನಾಡಿರುವ ಜೆಕೆ ಟೈರ್ ಆ್ಯಂಡ್ ಇಂಡಸ್ಟ್ರೀಸ್ ಲಿಮಿಟೆಡ್ನ ತಾಂತ್ರಿಕ ನಿರ್ದೇಶಕ ವಿ.ಕೆ.ಮಿಸ್ರಾ ಅವರು, ‘ಎಕ್ಸ್ಕಾನ್ 2021 ರಲ್ಲಿ ಜೆಕೆ ಟೈರ್ನ ಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದ ಪ್ರಗತಿಯನ್ನು ಪ್ರದರ್ಶಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಹೊಸ ಪ್ರೀಮಿಯಂ ಒಟಿಆರ್ ಟೈರ್ಗಳನ್ನು ಸುಧಾರಿತ ತಂತ್ರಜ್ಞಾನ, ಹೆಚ್ಚಿನ ಮೈಲೇಜ್ ಮತ್ತು ಅಗತ್ಯದ ಸಂದರ್ಭಗಳಲ್ಲಿ ಅಸಾಧಾರಣ ಮಟ್ಟದಲ್ಲಿ ಎಳೆಯುವ ಸಾಮರ್ಥ್ಯ ಹೊಂದಿರುವಂತೆ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ಟೈರ್ಗಳು ಸುದೀರ್ಘ ಬಾಳಿಕೆಯ ಚಕ್ರದ ಹೊರಮೈ ಹೊಂದಿವೆ. ವಿಸ್ತೃತ ಸೇವೆ ಒದಗಿಸಲು ಮತ್ತು ಗರಿಷ್ಠ ಮಟ್ಟದ ಸ್ಥಿರತೆ ನೀಡುವ ರೀತಿಯಲ್ಲಿ ಇವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿ ವಿನ್ಯಾಸಗಳ ಮೂಲಕ ಕಾರ್ಯಕ್ಷಮತೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ, ಭಾರತದ ಟೈರ್ ಉದ್ಯಮವು ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದೆ, ಟೈರ್ಗಳ ತಯಾರಿಕೆಯಲ್ಲಿ ನಮ್ಮ ತಂತ್ರಜ್ಞಾನ ಉನ್ನತಿ ಪ್ರದರ್ಶಿಸಲು ಮತ್ತು ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಈಡೇರಿಸುವ ಟೈರ್ಗಳನ್ನು ತಯಾರಿಸಲು ನಮಗೆ ಸಾಕಷ್ಟು ಅವಕಾಶಗಳನ್ನೂ ನೀಡುತ್ತಿದೆ’ ಎಂದು ಹೇಳಿದ್ದಾರೆ.
45/65-45 58ಪಿಆರ್ ವಿಇಎಂ 63 ಎಲ್5 ಟೈರ್ – ವೀಲ್ ಲೋಡರ್ಗಳಿಗಾಗಿ ವಿನ್ಯಾಸಗೊಳಿಸಲಾದ ಪ್ರೀಮಿಯಂ ಹೆವಿ ಡ್ಯೂಟಿ ಉತ್ಪನ್ನವಾಗಿದೆ. ಇದು ಅತ್ಯುತ್ತಮ ಕವಚದ ವಿಶ್ವಾಸಾರ್ಹತೆಯೊಂದಿಗೆ ಹೆಚ್ಚುವರಿ ಹೊರೆ ಸಾಗಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.
ವಿಇಎಂ 63ಗೆ ಸೇರ್ಪಡೆಯಾಗಿರುವ, 14.00-24 ಜಿಟಿಎಲ್ ಚಾಂಪ್ 16 ಪಿಆರ್ ಅನ್ನು ಕಠಿಣ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಗರಿಷ್ಠ ಮಟ್ಟದಲ್ಲಿ ಎಳೆಯುವ, ಹೆಚ್ಚು ಮೈಲೇಜ್ ನೀಡುವ ಮತ್ತು ದೀರ್ಘ ಬಾಳಿಕೆ ಬರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಟೈರ್ಗಳನ್ನು ಮೋಟಾರ್ ಗ್ರೇಡರ್ ಮತ್ತು ಟೆಲಿ ಹ್ಯಾಂಡ್ಲರ್ನಲ್ಲಿ ಬಳಸಲು ಉದ್ದೇಶಿಸಲಾಗಿದೆ.
12.00-24 ಹಾರ್ಡ್ ರಾಕ್ ಚಾಂಪಿಯನ್ 20ಪಿಆರ್ ಇ4– ಇದು ಗಣಿಗಾರಿಕೆಗಳಲ್ಲಿ ಬಳಸುವ ಟಿಪ್ಪರ್ ಟ್ರಕ್ಗಳಿಗೆ ಅತ್ಯುತ್ತಮವಾದ ರಕ್ಷಣೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಎಳೆತ ಒದಗಿಸುವ ಟೈರ್ ಆಗಿದೆ.
16.00-25 ವಿಇಎಂ 045 44ಪಿಆರ್ ಇ3 ಟಿಟಿ– ಅನ್ನು ಗಣಿಗಾರಿಕೆ ಟಿಪ್ಪರ್ಗಳ ಪ್ರತಿ ಟೈರ್ಗೆ ಹೆಚ್ಚಿನ ಭಾರವನ್ನು ಸಮರ್ಥವಾಗಿ ಸಾಗಿಸುವ ರೀತಿಯಲ್ಲಿ ವಿಶಿಷ್ಟ ಬಗೆಯಲ್ಲಿ ವಿನ್ಯಾಸಗೊಳಿಸಲಾಗಿದೆ.