Kannada NewsKarnataka NewsLatest

BJP ಅಭ್ಯರ್ಥಿಯಾಗಿ ಅರುಣ ಶಹಾಪುರ ನಾಮಪತ್ರ ಸಲ್ಲಿಕೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜೂನ್ 13ರಂದು ನಡೆಯಲಿರುವ ವಿಧಾನ ಪರಿಷತ್ತಿನ ವಾಯುವ್ಯ  ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರುಣ ಶಹಾಪುರ ಸೋಮವಾರ ನಾಮಪತ್ರ ಸಲ್ಲಿಸಿದರು.

ಅರುಣ ಶಹಾಪುರ 3ನೇ ಬಾರಿಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಸಂಸದೆ ಮಂಗಲಾ ಅಂಗಡಿ, ವಿಧಾನ ಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿದ್ದರು.

ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಮೂರು ಬಾರಿ ಟಿಕೆಟ್ ನೀಡಿದೆ. ಮೂರನೇ ಬಾರಿಯೂ ಶಿಕ್ಷಕರು ನನ್ನನ್ನು ಗೆಲ್ಲಿಸಲಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದ ಕಾರ್ಯಕರ್ತನಿಗೂ, ಹೊರಗಿನವರಿಗೂ ಚುನಾವಣೆ ನಡೆದಿದೆ. ನನಗೆ ಬೆಳಗಾವಿ ಅಖಂಡ ಜಿಲ್ಲೆಯ ಬಿಜೆಪಿ ನಾಯಕತ್ವ, ಶಿಕ್ಷಕರ ಎಲ್ಲ ಸಂಘದವರ ಆಶೀರ್ವದ ಇದೆ. ಕಾಂಗ್ರೆಸ್ ನವರು ಏನೇ ತಂತ್ರ, ಕುತಂತ್ರ ಮಾಡಿದರೂ ಅದನ್ನು ಎದಿರಿಸುವ ಶಕ್ತಿ ಮತ್ತು ಸಾಮರ್ಥ್ಯ ನಮಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬಹುತೇಕ ಶಿಕ್ಷಕ ಸಂಘಟನೆಗಳು ನಮ್ಮ‌ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದಾರೆ.  ನಾವು ಶಿಕ್ಷಕರ, ಪದವೀಧರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇವೆ. ಶಿಕ್ಷಕರ ಸಮಸ್ಯೆಗಳಿಗೆ ನಾವು ಬಹಳಷ್ಟು ಹೋರಾಟ ಮಾಡಿದ್ದೇವೆ ಎಂದರು.

ಕಾಂಗ್ರೆಸ್, ಬಿಜೆಪಿ ಸರ್ಕಾರ ಇದ್ದಾಗಲೂ ಸದನದ ಒಳಗೆ ಸದನದ ಹೊರಗೆ ಹೋರಾಟ ಮಾಡಿದ್ದೇವೆ. ಬಹುದೊಡ್ಡ ಅಂತರದಿಂದ ಚುನಾವಣೆ ಗೆಲ್ಲುವ ವಿಶ್ವಾಸ ಇದೆ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕಾಂಗ್ರೆಸ್ ನವರು ಸೋಲುವ ಭೀತಿಯಿಂದ ಲ್ಯಾಪ್ ಟಾಪ್ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.

ಮೇ 26ರಂದು ಬಿಜೆಪಿಯ ಪದವೀಧರ ಮತಕ್ಷೇತ್ರದಿಂದ ಹನುಮಂತ ನಿರಾಣಿ, ಶಿಕ್ಷಕರ ಮತಕ್ಷೇತ್ರದಿಂದ ಅರುಣ್ ಶಹಾಪುರ್ ನಾಮಪತ್ರ ಸಲ್ಲಿಸಲಿದ್ದು, ಪಕ್ಷದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ಖಾಲಿ ಹುದ್ದೆಗಳ ಭರ್ತಿಗೆ ಸರಕಾರದ ಅನುಮತಿ: ಸಿಎಂಗೆ, ಸಚಿವರಿಗೆ ಅರುಣ ಶಹಾಪುರ ಕೃತಜ್ಞತೆ

ಶಾಲಾ-ಕಾಲೇಜುಗಳಿಗೆ ಅನುದಾನ, ಪಿಂಚಣಿ, NPS ರದ್ದು ಸೇರಿದಂತೆ ವಿವಿಧ ಬೇಡಿಕೆ: ಅರುಣ ಶಹಾಪುರ ನೇತೃತ್ವದಲ್ಲಿ ಸಿಎಂಗೆ ಮನವಿ

NPS ರದ್ದು: ಸುಳಿವು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ಸರಕಾರಿ ನೌಕರರಿಗೆ ಖುಷಿ ಸುದ್ದಿ

ಶಾಲೆ ಹಾಗೂ ಶಿಕ್ಷಕರ ಅಸಮಾನ ಹಂಚಿಕೆ ಸರಿಪಡಿಸಲು ಪ್ರಯತ್ನ – ಅರುಣ ಶಹಾಪುರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button