https://youtube.com/shorts/
https://studio.youtube.com/video/ZkWgqCcgOSs/edit
ಪ್ರಗತಿವಾಹಿನಿ ಸುದ್ದಿ, ಶಿರಸಿ-
12 ಕ್ವಿಂಟಲ್ ಚಾಲಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋ ರಿಕ್ಷಾ ವಶಕ್ಕೆ ಪಡೆದಿದ್ದಾರೆ.
ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದಲ್ಲಿ ಮಂಜುನಾಥ ತಂದೆ ಬಸಪ್ಪ ಗೌಡರ್ ಎಂಬುವವರ ಕೊಟ್ಟಿಗೆಯಲ್ಲಿ ಸಂಗ್ರಹಿಸಿಟ್ಟ 12 ಕ್ವಿಂಟಲ್ ಅಡಿಕೆ ಹಾಗೂ ಎರಡು ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ 1ಕ್ವಿಂಟಲ್ ಕೆಂಪಡಿಕೆ ಸುಮಾರು 4,60,000 ರೂ ಮೌಲ್ಯದ ಅಡಿಕೆ ನಿನ್ನೆ ಕಳ್ಳತನವಾಗಿತ್ತು.
ಇಂದು ಆರೋಪಿ ಆಟೋರಿಕ್ಷಾ ಚಾಲಕ ರಾಘವೇಂದ್ರ ಪರಮಾನಂದ ಶಿರಹಟ್ಟಿ( 33)ಯನ್ನು ಗ್ರಾಮೀಣ ಠಾಣೆ ಪೋಲಿಸರು ವಶಕ್ಕೆ ಪಡೆದು ಕಳ್ಳತನವಾಗಿದ್ದ 12 ಕ್ವಿಂಟಲ್ ಸಿಪ್ಪೆ ಚಾಲಿ ಅಡಿಕೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಜಪ್ತು ಮಾಡಿದ್ದಾರೆ.
ಇನ್ನೋರ್ವ ಆರೋಪಿ ತಲೆಮಾರೆಸಿಕೊಂಡಿದ್ದಾನೆ. ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ಈರಯ್ಯ ಡಿ. ಎನ್, PSI ಶ್ಯಾಮ್ ವಿ ಪಾವಸ್ಕರ್, ಪ್ರೊಬೆಷನರಿ ಪಿಎಸ್ಐ ದೇವೇಂದ್ರ ನಾಯ್ಕ್ ಗ್ರಾಮೀಣ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಉ.ಕ ಪೊಲೀಸ್ ಅಧೀಕ್ಷಕ ಡಾ. ಸುಮನ್ ಪೆನ್ನೇಕರ್ ರವರು ಕಾರ್ಯಾಚರಣೆಯಲ್ಲಿದ್ದ ಅಧಿಕಾರಿ,ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ