Latest

ಬಿಜೆಪಿ ಚಿಕ್ಕ ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ; ಡಿ.ಕೆ.ಶಿವಕುಮಾರ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:

ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿಅಕುಮಾರ್, ರಾಜ್ಯದ ಚರಿತ್ರೆಯನ್ನೇ ಬದಲಿಸುವ ಮೂಲಕ ಶಿಕ್ಷಣದಲ್ಲಿ ಪಕ್ಷದಾ ಅಜಂಡಾ ತರಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗೆ ಹೇಗೆದೆಯೋ ಹಾಗೇ ನಡೆದುಕೊಂಡು ಹೋಗಲಿ. ಇಷ್ಟು ದಿನ ಯಾರು ವಿದ್ಯಾವಂತರೆ ಆಗಿಲ್ಲವೇ? ಎದು ಪ್ರಶ್ನಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದಾಗಲಿ, ಶೈಕ್ಷಣಿಕ ಸಮಸ್ಯೆ ಬಗೆಹರಿಸುವುದಾಗಲಿ ಮಾಡುವುದನ್ನು ಬಿಟ್ಟು ಪಕ್ಷದ ಅಜೆಂಡಾವನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವ ಮೂಲಕ ಬಿಜೆಪಿ ಮಕ್ಕಳಲ್ಲಿ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇದು ಖಡನೀಯ ಎಂದು ಗುಡುಗಿದರು.

ಇನ್ನು ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ತಾಂಬೂಲ ಪ್ರಶ್ನೆ ಅದು ವೈಯಕ್ತಿಕ. ಇಂತಹ ವಿಚಾರಗಳಿಗೆ ಸರ್ಕಾರದಲ್ಲಿ ಯಾವತ್ತೂ ಅವಕಾಶಗಳಿಲ್ಲ ಎಂದು ಹೇಳಿದರು.

 
ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ  ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮ್ಮ ವಿಶ್ವಾಸ ವ್ಯಕ್ತ ಪಡಿಸಿದರು.
  ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಪ್ರಕಾಶ ಹುಕ್ಕೇರಿ  ಹಾಗೂ ವಾಯುವ್ಯ ಪದವೀಧರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸುನೀಲ್ ಸಂಕ್‌ ಉಮೇದವಾರಿಕೆ ಸಲ್ಲಿಸಿದ್ದಾರೆ. ಈ ಚುನಾವಣೆಯನ್ನು ಕಾಂಗ್ರೆಸ್ ಸವಾಲಾಗಿ ಸ್ವೀಕರಿಸಿದೆ. ಬುದ್ಧಿವಂತ ಮತದಾರರು ಬಿಜೆಪಿಯನ್ನು ತಿರಸ್ಕರಿಸಿ, ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಗೆಲುವು ಪಡೆಯುತ್ತೇವೆ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪ್ರಕಾಶ ಹುಕ್ಕೇರಿ ಶಕ್ತಿಶಾಲಿ ನಾಯಕ: 
ಪ್ರಕಾಶ ಹುಕ್ಕೇರಿ  ನೂರಾರು ಜನ ನಾಯಕರನ್ನು ಸೃಷ್ಠಿ ಮಾಡುವ ಶಕ್ತಿ ಇರುವವರು. ವಿಧಾನ ಪರಿಷತ್ತ್‌ ನಲ್ಲಿ, ವಿಧಾನಸಭೆಯಲ್ಲಿ, ಜಿಪಂಯಲ್ಲಿ ಅಪಾರವಾದ ಅನುಭವ ಹೊಂದಿರುವ ನಾಯಕರು.  ಇಂತಹ ಶಕ್ತಿಶಾಲಿ ನಾಯಕ ಪ್ರಕಾಶ ಹುಕ್ಕೇರಿ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಇವರು ಕೂಡಾ ತಮ್ಮ ಕೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಿ ಅಭಿವೃದ್ಧಿ ಹರಿಕಾರ ಎಂದೆ ಹೆಸರು ಪಡೆದ ನಾಯಕರಾಗಿದ್ದಾರೆ.  ಅಲ್ಲದೇ  ವಾಯುವ್ಯ ಪದವೀಧರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸುನೀಲ್ ಸಂಕ್‌ ಕೂಡಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕ. ಒಟ್ಟಾರೆಯಾಗಿ ನಮ್ಮ ಇಬ್ಬರು ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ ಎಂದರು.
ವಿಷ ಬೀಜ ಬಿತ್ತುವ ಬಿಜೆಪಿ:
ಬಿಜೆಪಿ ರಾಜ್ಯದ ಚರಿತ್ರೆಯನ್ನು ಬದಲಾವಣೆ ಮಾಡಲು ಮಕ್ಕಳ ಪಠ್ಯಪುಸ್ತಕಗಳಲ್ಲಿ ತಮ್ಮ ಅಜೆಂಜಾ ಹಾಕಲು ಹೊರಟಿರುವುದು ಖಂಡನೀಯವಾಗಿದೆ. ಹಿಂದೆ ಶಿಕ್ಷಣ ಸಚಿವರಾದಂತಹ ವಿಶ್ವನಾಥ ಅವರು ಈಗ ಹಾಲಿ ಬಿಜೆಪಿ ನಾಯಕರು ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಅದಕ್ಕೆ ಮೊದಲು ಉತ್ತರವನ್ನು ಕೊಡಲಿ. ನಮ್ಮ ಉತ್ತರ ಸ್ಪಷ್ಟವಾಗಿದ್ದು, ಯಾವುದೇ ತರಹದ ಬದಲಾವಣೆ ಮಾಡಬಾರದು ಎಂದು ಹೇಳಲಾಗಿದೆ. ಮುಖ್ಯವಾಗಿ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಭಗತಸಿಂಗ್ ಹಾಗೂ ನಾರಾಯಣ ಗುರು, ಅಂಬೇಡ್ಕರ್‌, ಗಾಂಧೀಜಿ ಅವರ ವಿಚಾರ ಬದಲಾವಣೆ ಮಾಡುವ ಕಾರ್ಯ ಇಲ್ಲಿಗೆ ಬಿಡಬೇಕು ಎಂದು ಎಚ್ಚರಿಕೆ ನೀಡಿದರು.
ಚಿಕ್ಕ ಮಕ್ಕಳಿಗೆ ಕೋಮು ವಿಷ ಬೀಜ ಬಿತ್ತುವ ಹುನ್ನಾರ ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಬಿಜೆಪಿ ಇಂತಹ ಕಾರ್ಯಗಳಿಂದಲೇ  ರಾಜ್ಯದಲ್ಲಿ ಗಲಾಟೆಗಳು ಹೆಚ್ಚಾಗುತ್ತಿವೆ. ಶೀಗ್ರವೇ ಮಕ್ಕಳ ಪಠ್ಯದಲ್ಲಿ ಬದಲಾವಣೆ ಮಾಡುವ ಕಾರ್ಯ ಇಲ್ಲಿಗೆ ಬೀಡಬೇಕು ಎಂದು ಎಚ್ಚರಿಕೆ ನೀಡಿದರು.

ಶಿಕ್ಷಕರ, ಪದವೀಧರ ಕ್ಷೇತ್ರದ ಅಭಿವೃದ್ದಿ ಕಾಂಗ್ರೆಸ್‌ ನಿಂದ ಮಾತ್ರ ಸಾಧ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button