Latest

ಆರ್.ಎಸ್.ಎಸ್.ನವರು ಮೂಲ ಭಾರತದವರೇ? ಚರ್ಚೆಗೆ ಕಾರಣವಾಯ್ತು ಸಿದ್ದರಾಮಯ್ಯ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್.ಎಸ್.ಎಸ್ ನವರು ಮೂಲ ಭಾರತೀಯರೇ? ಅವರು ಭಾರತೀಯರಲ್ಲ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ವಿವಾದ ಸೃಷ್ಟಿಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಡಿದ ವಿಪಕ್ಷ ನಾಯಕ ಸಿದ್ದಾರಾಮಯ್ಯ, ಇಂದಿನ ಪ್ರಧಾನಿ ಮೋದಿಯವರಿಗೆ ನೆಹರು ಹೋಲಿಕೆ ಸರಿಯಲ್ಲ. ನೆಹರು ಎಲ್ಲಿ? ಮೋದಿ ಎಲ್ಲಿ? ಆಕಾಶ ಭೂಮಿಯ ಅಂತರವಿದೆ. ನೆಹರು ಮಾಡಿದ ಸಾಧನೆಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ಪಂಚವಾರ್ಷಿಕ ಯೋಜನೆ ತೆಗೆದು ನೀತಿ ಆಯೋಗ ಜಾರಿಗೆ ತಂದರು. ನೀತಿ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಆರ್ ಬಿಐ ಅನ್ನು ನಿಷ್ಕ್ರಿಯವನ್ನಾಗಿಸಿದರು ಎಂದರು.

Related Articles

ಯುವ ಜನತೆಯ ದಾರಿ ತಪ್ಪಿಸಿ ಮೂಢ ನಂಬಿಕೆಯ ದಾಸರನ್ನಾಗಿ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ರೋಹಿತ್ ಚಕ್ರತೀರ್ಥ ಎಂಬುವವರಿಗೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು. ಚಕ್ರತೀರ್ಥ ಹೆಡ್ಗೆವಾರ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಂತವನ ಕೈಗೆ ಪಠ್ಯ ಪುಸ್ತಕ ರಚನೆ ಕೊಟ್ಟರೆ ಏನಾಗುತ್ತೆ ಮತ್ತೆ? ಎಂದು ಪ್ರಶ್ನಿಸಿದ್ದಾರೆ.

ಇತಿಹಾಸವನ್ನು, ಚರಿತ್ರೆಗಳನ್ನು ಕೆದಕುವ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನಗಳು ಎಲ್ಲಿತ್ತು? ಮಸೀದಿಯಲ್ಲಿ ಏನಿತ್ತು? ಹೀಗೆ ಎಲ್ಲಾ ಮೂಲಗಳನ್ನು ಕೆದಕಲು ಹೊರಟಿದ್ದಾರೆ. ಹಾಗಾದರೆ ನಾವೂ ಕೂಡ ಕೇಳಬಹುದು ಆರ್ ಎಸ್ ಎಸ್ ಮೂಲ ಭಾರತದವರಾ? ಆರ್ಯರು ಈ ದೇಶದವರಾ? ಇವರು ದ್ರಾವಿಡರಾ? 600 ವರ್ಷ ಮೊಘಲರು ದೇಶ ಆಳಲು ಕಾರಣ ಯಾರು? ಬ್ರಿಟೀಷರು 200 ವರ್ಷ ಭಾರತದಲ್ಲಿ ಆಡಳಿತ ನಡೆಸಲು ಯಾರು ಕಾರಣ? ಒಗ್ಗಟ್ಟಿನಿಂದ ಇದ್ದಿದ್ದರೆ ಹಾಗೆ ಆಗುತ್ತಿತ್ತೇ? ಹೀಗೆ ನಾವು ಪ್ರಶ್ನೆ ಮಾಡುತ್ತಾ ಮೂಲ ಕೆದಕುವ ಕೆಲಸ ಮಾಡಬಹುದು. ಆದರೆ ಇದನ್ನೆಲ್ಲ ಮಾತನಾಡಬಾರದು ಎಂದು ಸುಮ್ಮನಿದ್ದೇನೆ ಎಂದು ಹೇಳಿದರು.

Home add -Advt

ಇದೇ ವೇಳೆ ಮಧ್ಯ ಪ್ರವೇಶಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಬಗ್ಗೆ ಸಂಸತ್ ನಲ್ಲಿ ಹೇಳಿದ್ದೆ. ಬಿಜೆಪಿಯವರು ಶಾರುಖ್ ಖಾನ್ ಹೊರ ದೇಶಕ್ಕೆ ಹೋಗಲಿ. ಅವರು ಈ ದೇಶದವರಲ್ಲಾ ಎಂದು. ಈ ವೇಳೆ ನಾನು ಉತ್ತರಿಸಿದ್ದೆ. ನೀವು ಮೂಲತ: ಈ ದೇಶದವರೇ? ನೀವು ಸೆಂಟ್ರಲ್ ಏಷ್ಯಾದಿಂದ ಬಂದವರು. ಹಿಟ್ಲರ್ ವಂಶದವರು ಎಂದು. ಅಂದು ಪಾರ್ಲಿಮೆಂಟ್ ನಲ್ಲಿಯೂ ಈ ಚರ್ಚೆಯಾಗಿತ್ತು ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಇದೀಗ ಬಿಜೆಪಿ ಹಾಗೂ ಆರ್.ಎಸ್.ಎಸ್.ನಾಯಕರ ಕಣ್ಣು ಕೆಂಪಗಾಗಿಸಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆ; 7 ಸದಸ್ಯರು ಅವಿರೋಧ ಆಯ್ಕೆ

Related Articles

Back to top button