Kannada NewsLatest

ಪಠ್ಯ ಪುಸ್ತಕ ವಿವಾದ; ಕಾಂಗ್ರೆಸ್ ನಿಂದ ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸ; ಶಾಸಕ ಪಿ.ರಾಜೀವ್ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಠ್ಯಕ್ರಮದ ವಿಷಯದಲ್ಲಿ ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ನ ಕೀಳುಮಟ್ಟದ ಟ್ರೂಲ್ ಕಿಟ್ ಟೆರರಿಸಮ್ ಎಂದು ಕುಡುಚಿ ಶಾಸಕ ಪಿ.ರಾಜೀವ ವಾಗ್ದಾಳಿ ‌ನಡೆಸಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಗ್ಧ ಜನರಲ್ಲಿ, ಸಾಹಿತಿಗಳಲ್ಲಿ ಅವರನ್ನು ಉದ್ರೇಕಗೊಳಿಸುವ ಪರಿಸ್ಥಿತಿ ಕಾಂಗ್ರೆಸ್ ಮಾಡುತ್ತಿದೆ.‌ ಹಿಟ್ ಆ್ಯಂಡ್ ರನ್ ಎಂಬುವುದು ಕಾಂಗ್ರೆಸ್ ನಲ್ಲಿದೆ. ಬಿಟ್ ಕ್ವಾಯಿನ್, ಸಾಹಿತ್ಯದ ವಿಷಯ ತೆಗೆದುಕೊಳ್ಳುತ್ತಾರೆ. ಅದು ಪೂರ್ಣಗೊಳ್ಳವುದು ಕಡಿಮೆ. ಈಗ ಪಠ್ಯ ಕ್ರಮದ ಬಗ್ಗೆ ಅಪಸ್ವರ ಎತ್ತಿರುವ ಕಾಂಗ್ರೆಸ್ ಟೂಲ್ ಕಿಟ್ ಟೆರರಿಸಮ್ ಎಂದು ಹರಿಹಾಯ್ದರು.

ಪಢ್ತೆಕ್ರಮ ಪರಿಷ್ಕರಣೆಯಲ್ಲಿ ಏನೇಲ್ಲ ಆಗಿಲ್ಲವೋ. ಅದು ಆಗಿದೆ ಎಂದು ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಸಾಹಿತ್ಯಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಮಾತಿಗೆ ಗೌರವ ಕೊಡಬೇಡಿ ಎಂದರು.

ಬರಗೂರು ರಾಮಚಂದ್ರಪ್ಪನವರು ಸೈದ್ಧಾಂತಿಕ ವಿಚಾರ ಏನೇ ಇದ್ದರೂ ಅವರ ಅಕ್ಷರಗಳನ್ನು ಗೌರವಿಸುತ್ತೇನೆ.‌ ಆದರೆ ಅವರ ಮೊಂಡು ವಾದ ಸರಿಯಲ್ಲ. ರೋಹಿತ್ ಚಕ್ರತೀರ್ಥ ಪಠ್ಯಕ್ರಮದ ಸಮಿತಿಯನ್ನು ಬರಗೂರು ರಾಮಚಂದ್ರಪ್ಪನವರು ವಿರೋಧ ಮಾಡುವವರು ಅವರು ಸಿದ್ದರಾಮಯ್ಯನವರ ಸರಕಾರದಲ್ಲಿ ಏನೂ ಮಾಡಿದರು ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದರು.

ಬಸವಣ್ಣನವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈ ಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿಯದ ವಿರೋಧಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸಿಂಧೂ ಸಂಸ್ಕೃತಿಯ ಪಾಠ ಕೈಬಿಟ್ಟ ಬರಗೂರು ರಾಮಚಂದ್ರಪ್ಪನವರು ನೆಹರೂ ಪಾಠ ಎಂದು ಸೇರಿಸಿ ಸೋನಿಯಾ ಗಾಂಧಿ, ಸಿದ್ದರಾಮಯ್ಯ ನವರ ಮನವೊಲಿಸುವ ಕೆಲಸ ಮಾಡಿದ್ದರು. ಅದನ್ನು ರೋಹಿತ ಚಕ್ರತೀರ್ಥ ಮರು ಸೇರ್ಪಡೆ ಮಾಡಿದ್ದಾರೆ ಎಂದರು.

ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದಾದಾಗೌಡಾ ಬಿರಾದಾರ, ಮುರುಘೇಂದ್ರಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ: ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button