ಪಠ್ಯ ಪುಸ್ತಕ ಸಮಿತಿ ವಿಸರ್ಜಿಸಲಾಗಿದೆ ಹೊರತು ಬರ್ಖಾಸ್ತು ಮಾಡಿಲ್ಲ; ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಠ್ಯ ಪುಸ್ತಕ ಪರೀಷ್ಕರಣೆ ವಿಚಾರವಾಗಿ ರಚನೆಯಾಗಿದ್ದ ಸಮಿತಿ ಕೆಲಸ ಮುಗಿದಿದೆ. ಹಾಗಾಗಿ ಸಮಿತಿ ವಿಸರ್ಜಿಸಲಾಗಿದೆ. ಹೊರತು ಬರ್ಖಾಸ್ತು ಆಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಪರಿಷ್ಕರಣೆಯಾಗಿರುವ ಪಠ್ಯ ಪುಸ್ತಕದಲ್ಲಿ ಯಾರಿಗಾದರೂ ಅಸಮಧಾನಗಳಿದ್ದರೆ, ದೂರುಗಳಿದ್ದರೆ ತಿಳಿಸಿದಲ್ಲಿ ಪರಿಶೀಲಿಸಿ ಸರಿಪಡಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪಠ್ಯ ಪುಸ್ತಕ ಸಮಿತಿಯ ಸಮಯ ಮುಗಿದಿರುವುದರಿಂದ ಸಮಿತಿ ವಿಸರ್ಜಿಸಲಾಗಿದೆಯಷ್ಟೆ ಎಂದು ಹೇಳಿದರು.
ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸಮಿತಿ ಎಂದರೆ ಯಾವುದೇ ಓರ್ವ ವ್ಯಕ್ತಿಯದ್ದಲ್ಲ ಸಮಿತಿಯಲ್ಲಿ ನಾಲ್ಕಾರುಜನರಿರುತ್ತಾರೆ. ಯಾವುದೇ ತೀರ್ಮಾನ ವ್ಯಕ್ತಿಗತವಾಗಿ ತೆಗೆದುಕೊಂಡು ನಿರ್ಧರಿಸಿರುವುದಿಲ್ಲ. ವಿಚಾರ ಆಧಾರಿತವಾಗಿ ಚರ್ಚಿಸಿ ಪಠ್ಯ ಪುಸ್ತಕದಲ್ಲಿ ಏನೆಲ್ಲ ಅಗತ್ಯ ಅಂಶ ಅಳವಡಿಸಬೇಕೋ ಆ ನಿಟ್ಟಿನಲ್ಲಿ ಅಳವಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಇನ್ನು ಯಾವುದೇ ರೀತಿಯ ಕಾನೂನು ಉಲ್ಲಂಘನೆ, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವಂತಿಲ್ಲ. ಏನೇ ದೂರುಗಳಿದ್ದರೂ ಸಂಬಂಧ ಪಟ್ಟ ಪೊಲೀಸರಿಗೆ, ಸೈಬರ್ ಕ್ರ್ರೈಂಗೆ ದೂರು ನೀಡಬೇಕು. ಸಮಾಜದಲ್ಲಿ ಒಡಕನ್ನು ಮೂಡಿಸುವಂತಹ ಯಾವುದೇ ಪ್ರಯತ್ನಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
ಬಾಲಕಿ ಮೇಲೆ ಕಾರಿನಲ್ಲಿ ಗ್ಯಾಂಗ್ ರೇಪ್; ಓರ್ವ ಆರೋಪಿ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ