ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಆರಂಭವಾಗಿದ್ದು, ಮಂಗಳೂರಿನ ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇಂತಹ ವಿದ್ಯಾರ್ಥಿಗಳಿಗೆ ಸಲಹೆ ನಿಡಿರುವ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಒಮ್ಮೆ ವಿದೇಶಕ್ಕೆ ಹೋಗಿ ನೋಡಿ ಆಗ ಗೊತ್ತಾಗುತ್ತೆ ಎಂದಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಹಿಜಾಬ್ ಗಾಗಿ ಪಟ್ಟು ಹಿಡಿಯುವ ವಿದ್ಯಾರ್ಥಿನಿಯರು, ಕಾನೂನಿನ ವಿರುದ್ಧವಾಗಿ ಮಾತನಾಡುವವರು, ಸುದ್ದಿಗೋಷ್ಠಿ ನಡೆಸುವವರು ಒಮ್ಮೆ ವಿದೇಶಕ್ಕೆ, ಪಾಕ್, ಸೌದಿಗೆ ಹೋಗಿ ನೋಡಲಿ. ಆಗ ನಮ್ಮ ದೇಶದ ಮಹತ್ವದ ಅರಿವಾಗುತ್ತೆ ಎಂದರು.
ವಿದೇಶಕ್ಕೆ ಹೋಗಿ ನೋಡಿದರೆ ಆಗ ನಮ್ಮ ದೇಶ ನೀಡಿರುವ ಸ್ವಾತಂತ್ರ್ಯ, ಕಾನೂನಿನ ಅವಕಾಶ ಗೊತ್ತಾಗುತ್ತದೆ. ಇಲ್ಲಿ ಹುಲಿ ತರಹ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಶಿಕ್ಷಣದ ವಿಷಯ ಬಂದಾಗ ಧರ್ಮ, ಸಮುದಾಯ ಎಂದು ಹಠ ಮಾಡುವುದು ಸರಿಯಲ್ಲ. ನಮ್ಮ ಗಮನ ಶೈಕ್ಷಣಿಕ ವಿದ್ಯಾಭ್ಯಾಸ, ಭವಿಷ್ಯದ ಚಿಂತನೆ ಬಗ್ಗೆ ಮಾತ್ರ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಕೇರಳದ ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಪತ್ತೆ; ಏನಿದು ಹೊಸ ವೈರಸ್? ಲಕ್ಷಣಗಳೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ