Kannada NewsKarnataka NewsLatest

ಬೆಳಗಾವಿ KSRPಯಲ್ಲಿ ತರಬೇತಿ ಅಭ್ಯರ್ಥಿ ಮೇಲೆ ಹಲ್ಲೆ?: CM ಗೆ ಟ್ವೀಟ್ ಮಾಡಿ ನೆರವು ಯಾಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  –  ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (KSRP) ಯಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದೂರು ಸಲ್ಲಿಸಿ, ಸಹಾಯಕ್ಕೆ ಬರುವಂತೆ ಕೋರಿದ್ದಾರೆ.

ಮುಖ್ಯಮಂತ್ರಿಗಳಿಗೆ ಟ್ವೀಟ್ ಮಾಡಿರುವ ವಿಶ್ವ ಯುಎಂ ಎನ್ನುವ ಅಭ್ಯರ್ಥಿ, ತರಬೇತಿ ವೇಳೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು  ದೂರಿದ್ದಾರೆ.

ಬೆಳಗಾವಿಯ ಕಂಗ್ರಾಳಿ ತರಬೇತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

Home add -Advt

ತರಬೇತಿ ಸಂದರ್ಭದಲ್ಲಿ ಓಡುವಾಗ ನಾನು ಅನುಮತಿ ಪಡೆಯದೆ ಮೂತ್ರ ವಿಸರ್ಜನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಮೂತ್ರ ವಿಸರ್ಜನೆ ಮಾಡುವಾಗಲೇ ಹಿಂದಿನಿಂದ ಬಂದು ನನಗೆ ಒದೆಯಲಾಗಿದೆ. ಅವಾಚ್ಯ ಶಬ್ಧದಿಂದ ಬಯ್ಯಲಾಗಿದೆ ಎಂದು ಟ್ವೀಟ್ ನಲ್ಲಿ ದೂರಿದ್ದಾರೆ.

ತಾವು ಬೇರೆ ಕ್ರಮಗಳನ್ನು ಕೈಗೊಳ್ಳುವ ಮೊದಲು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಬೇಕು ಎಂದು ವಿಶ್ವ ಕೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್ಆರ್ ಪಿ ಹಿರಿಯ ಅಧಿಕಾರಿಗಳು, ತರಬೇತಿ ವೇಳೆ ಅನುಮತಿ ಪಡೆಯದೆ ಹೊರಗೆ ಹೋಗಿ ವಿಶ್ವ ಅವರು ಶಿಸ್ತನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಈ ಘಟನೆ ನಡೆದಿದೆ. ಆ ಅಭ್ಯರ್ಥಿಯ ಯುನಿಟ್ ಬದಲಿಸಲಾಗಿದೆ. ಘಟನೆಯ ಎಲ್ಲ ವಿವರಗಳನ್ನೂ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆೆ.

 

https://twitter.com/Vshwa_om/status/1533658836766052352?s=20&t=O15UQZlKaE8dZmeS_kEUOA

Related Articles

Back to top button